ಮೈಸೂರು

ನಾಳೆಯಿಂದ ರಾಷ್ಟ್ರೀಯ ವಿಚಾರಸಂಕಿರಣ

ಮೈಸೂರು,ಮಾ.21 : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನೂರು ವರ್ಷಗಳ ತತ್ವಶಾಸ್ತ್ರ –ಒಂದು ಅವಲೋಕನ ವಿಷಯವಾಗಿ ಮೂರು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಮಾನಸಗಂಗೋತ್ರಿಯ ಇಎಂಆರ್ ಸಿಯಲ್ಲಿ ಆಯೋಜಿಸಿದೆ.

ಮಾ.22 ರಿಂದ 24ರವರೆಗೆ ನಡೆಯುವ ಗೋಷ್ಠಿಯನ್ನು ಮಾ.22ರ ಬೆಳಗ್ಗೆ 10ಕ್ಕೆ ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಚಾಲನೆ ನೀಡುವರು, ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು ಅಧ್ಯಕ್ಷತೆ, ಕುಲಸಚಿವೆ ಡಿ.ಭಾರತಿ, ಪ್ರೊ.ಜಿ.ಹೇಮಂತ ಕುಮಾರ್ ಇರುವರು.

ನಂತರ ಮೂರು ದಿನಗಳ ಕಾಲ ನಡೆಯುವ ಗೋಷ್ಠಿಯಲ್ಲಿ ನಾಡಿನ ಹಿರಿಯ ತತ್ವಶಾಸ್ತ್ರಜ್ಞರು,ಪ್ರಾಧ್ಯಾಪಕರು ಭಾಗಿಯಾಗಿ ವಿಚಾರ ಮಂಡಿಸುವರು. ಮಾ.24ರ ಸಂಜೆ 3 ಗಂಟೆಗೆ ಸಮಾರೋಪ ನಡೆಯುವುದು. ಮಂಗಳೂರು ಮತ್ತು ಗೋವಾ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಬಿ.ಶೇಖ್ ಅಲೀ, ತತ್ವಶಾಸ್ತ್ರ ಸಮಾಜದ ಅಧ್ಯಕ್ಷ ಡಾ.ಎಸ್.ವೆಂಕಟೇಶ್ ಅಧ್ಯಕ್ಷತೆ. ಇಎಂಆರ್ ಸಿ ನಿರ್ದೇಶಕ ಪ್ರೊ.ಎಂ.ಆರ್.ಗಂಗಾಧರ್ ಸಿಂಡಿಕೇಟ್ ಸದಸ್ಯ ಎಂ.ಎಸ್.ಎಸ್.ಕುಮಾರ್ ಇನ್ನಿತರರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: