ಮೈಸೂರು

ಶಿಕ್ಷಕರ ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯ : ತನ್ವೀರ್ ಸೇಠ್ ಭೇಟಿಗೆ ನಿರ್ಧಾರ

ಶಿಕ್ಷಕರ ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಲಾಗುವುದು ಎಂದು ಪ್ರಜ್ಞಾವಂತ ಮತ್ತು ಕಾಳಜಿವುಳ್ಳ ನಾಗರಿಕರ ವೇದಿಕೆಯ ಸಂಚಾಲಕ ಎಂ.ಲಕ್ಷ್ಮಣ ತಿಳಿಸಿದರು.

ಮೈಸೂರಿನ ಇಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ  ನಡೆದ ಸಭೆಯಲ್ಲಿ ಎಂ.ಲಕ್ಷ್ಮಣ ಮಾತನಾಡಿ ಇದೇ ವರ್ಷ ಜೂನ್ ಒಂದರಿಂದ ಸರ್ಕಾರ ಕುಮಾರ್ ನಾಯಕ್ ವರದಿಯನ್ನು ಜಾರಿ ಮಾಡಿದೆ. ಇದರನ್ವಯ ಸರ್ಕಾರಿ, ಅನುದಾನಿತ ಪ್ರೌಢಶಾಲೆಯ ಎಲ್ಲ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರಿಗೆ ಒಂದು ಹೆಚ್ಚುವರಿ ವೇತನ ಭಡ್ತಿಯನ್ನು ಮಂಜೂರು ಮಾಡಲಾಗಿದೆ. ಆದರೆ ದೈಹಿಕ, ವೃತ್ತಿ, ಚಿತ್ರಕಲೆ ಸೇರಿದಂತೆ 25ಸಾವಿರ ಇತರೆ ಹೆಚ್ಚುವರಿ ಶಿಕ್ಷಕರಿಗೆ ವೇತನ ಭಡ್ತಿ ನೀಡಿಲ್ಲ. ಇದಕ್ಕೆ ಶಿಕ್ಷಣ ಇಲಾಖೆಯ ನಿರ್ದೇಶಕರು, ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಿಕ್ಷಣ ಪ್ರಧಾನ ಕಾರ್ಯದರ್ಶಿಯ ಬೇಜವಾಬ್ದಾರಿಯೇ ಕಾರಣ ಎಂದರು.

ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿ ಇವೆಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಬೇಕು. ಬೇಡಿಕೆ ಈಡೇರದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿಗೆ ಬಂದಾಗ ಮನವಿ ಪತ್ರ ನೀಡಲಾಗುವುದು ಎಂದು ಲಕ್ಷ್ಮಣ ತಿಳಿಸಿದರು ಇದಕ್ಕೆ ಸರ್ವಾನುಮತದಿಂದ ಸರ್ವ ಶಿಕ್ಷಕರು ಒಪ್ಪಿಗೆ ಸೂಚಿಸಿದರು.

ದೈಹಿಕ ಶಿಕ್ಷಕರು, ಪದವಿ ಶಿಕ್ಷಕರ ಸಂಘಗಳ ನೇತೃತ್ವದಡಿ 100ಕ್ಕೂ ಅಧಿಕ ಶಿಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

comments

Related Articles

error: