ಮೈಸೂರು

ನಾಯಕ ಮತ್ತು ತಳವಾರ ಸಮುದಾಯವಿನ್ನು   ಪರಿಶಿಷ್ಟ ವರ್ಗಕ್ಕೆ

ಮೈಸೂರು,ಮಾ.22:- ನಾಯಕ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು  ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ ಪ್ರಯತ್ನ ಪಟ್ಟು ಸರ್ಕಾರದ ಕೊನೆದಿನಗಳಲ್ಲಿ ಯಶಸ್ವಿಯಾಗಿತ್ತು. ಆದರೆ ಮುಂದಿನ ಬೆಳವಣಿಗೆಯನ್ನು ಅಂದಿನ ಯುಪಿಎ ಸರ್ಕಾರ ಇದನ್ನು ಗಣನೆಗೆ ತೆಗೆದುಕೊಳ್ಳದೆ ತಟಸ್ಥ ನಿಲುವು ತಾಳಿತ್ತು. ಇದರಿಂದ   ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಸಮಾಜ ಮುಖಿ ಯೋಜನೆಯೊಂದು ಏನು ಬೆಳವಣಿಗೆಯಾಗಿರಲಿಲ್ಲ. ಆದರೆ ಇಂದಿನ ನರೇಂದ್ರ ಮೋದಿ ಸರ್ಕಾರ ನಾಯಕ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವುದರಿಂದ ನಾಯಕ ಮತ್ತು ತಳವಾರ ಸಮುದಾಯ ದವರಿಗೆ  ಸಿಗುವ ಸೌಲಭ್ಯಗಳ ಅನಿವಾರ್ಯತೆಯನ್ನು ಅರಿತು ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ  ನಾಯಕ ಮತ್ತು ತಳವಾರ ಸಮುದಾಯವನ್ನು  ಪರಿಶಿಷ್ಟ ವರ್ಗಕ್ಕೆ ಸೇರಿಸಲು ಆಜ್ಞೆಯನ್ನು ಹೊರಡಿಸಿದೆ.

ವಿಶೇಷವಾಗಿ ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಜುಯಲ್ ಓರಮ್ ಅವರ ಸಹಕಾರದಿಂದ ನಿನ್ನೆ ಸಂಜೆ   ಕ್ಯಾಬಿನೆಟ್ ನಲ್ಲಿ ಇದಕ್ಕೆ ಒಪ್ಪುಗೆ ನೀಡುವುದರ ಮೂಲಕ ನಾಯಕ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ನಿರ್ಣಯ  ಕೈಗೊಳ್ಳಲಾಯಿತು. ಈ ನಿರ್ಣಯದಿಂದ  ಕರ್ನಾಟಕ ರಾಜ್ಯದ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಒಳಗೊಂಡಂತೆ  ಸುಮಾರು 12 ಜಿಲ್ಲೆಗಳಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಸುಮಾರು 4  ತಲೆಮಾರಷ್ಟು    ಜನರು  ಇನ್ನು ಮುಂದೆ ಸದುಪಯೋಗ ಪಡೆಯಲಿದ್ದಾರೆ.

ಇದಕ್ಕೆ ಕಾರಣಕರ್ತರಾದ ಕೇಂದ್ರ ಸಚಿವರುಗಳಾದ ಅನಂತ ಕುಮಾರ್, ಜುಯಲ್ ಓರಮ್ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮಾಜಿ ಸಚಿವ ಎಸ್.ಎ.ರಾಮದಾಸ್  ಕೃತಜ್ಞತೆ ಸಲ್ಲಿಸಿದ್ದಾರೆ.  ಈ ಸಂದರ್ಭದಲ್ಲಿ ಶ್ರೀರಾಮುಲು, ಪ್ರತಾಪ್ ಸಿಂಹ,   ಶಿವಕುಮಾರ್, ಅಪ್ಪಣ್ಣ, ಸಿದ್ದರಾಜು, ಪುಟ್ಟಣ್ಣ, ಸುಂದರ್, ಬಾಲು, ಬಂಗಾರು  ಸೋಮನಾಯಕರು, ಚಿತ್ರದುರ್ಗದ  ಪ್ರಸನ್ನಾನಂದ ಸ್ವಾಮಿಗಳು, ವಾಲ್ಮೀಕಿ ಮಠ ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: