ಪ್ರಮುಖ ಸುದ್ದಿಮೈಸೂರು

ಮೈಸೂರಿನಲ್ಲಿ ಆಕ್ರೋಶ್ ದಿವಸ್‍ಗೆ ವಿರೋಧ: ಎಂದಿನಂತೆ ಜನಜೀವನ

ಮೈಸೂರಿನಲ್ಲಿ ಆಕ್ರೋಶ್ ದಿವಸ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಸರಕಾರ ಕಪ್ಪುಹಣ  ಮತ್ತು ಖೋಟಾ ನೋಟುಗಳ ವಿರುದ್ಧ ಸಮರ ಸಾರಿ 500 ಹಾಗೂ 1000 ರೂ. ಮುಖಬೆಲೆಯ ಹಳೆ ನೋಟುಗಳನ್ನು ಅಮಾನ್ಯ ಮಾಡಿರುವುದನ್ನು ವಿರೋಧಿಸಿ ವಿಪಕ್ಷಗಳು ಸೋಮವಾರದಂದು ಭಾರತ ಬಂದ್‍ಗೆ ಕರೆ ನೀಡಿತ್ತು. ಪ್ರತಿಭಟನೆಗಷ್ಟೇ ಹೋರಾಟ ಸೀಮಿತ ಎಂದು ಕಾಂಗ್ರೆಸ್ ಈಗಾಗಲೇ ಹೇಳಿಕೆ ನೀಡಿರುವುದರಿಂದ ಜನಜೀವನದ ಮೇಲೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

ದೇವರಾಜ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ನಡೆದಿದ್ದು, ಬಸ್ ಮತ್ತು ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಶಾಲಾ-ಕಾಲೇಜಿಗೂ ರಜೆ ಘೋಷಿಸಲಾಗಿಲ್ಲ. ವಿಶ್ವವಿದ್ಯಾನಿಲಯದ ಬಿಎ, ಬಿಕಾಮ್, ಬಿಎಸ್ಸಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಎಲ್ಲ ಹೋಟೆಲ್‍ಗಳು, ಬೇಕರಿಗಳು, ರೆಸ್ಟೋರೆಂಟ್‍ಗಳು ತೆರಿದಿವೆ. ಆಟೋ ರಿಕ್ಷಾ ಮಾಲೀಕರು ಹಾಗೂ ಟ್ಯಾಕ್ಸಿ ಮಾಲೀಕರೂ ಸಹ ಬಂದ್‍ಗೆ ಸಹಕಾರ ನೀಡಿಲ್ಲ. ಖಾಸಗಿ ಬಸ್ಸುಗಳು ಮತ್ತು ಮಿನಿ ಲಾರಿಗಳು ಸಂಚಾರ ನಡೆಸುತ್ತಿವೆ.

ಮಂಡ್ಯ, ಚಾಮರಾಜನಗರದಲ್ಲಿಯೂ ಆಕ್ರೋಶ ದಿವಸ್‍ಗೆ ವಿರೋಧ ವ್ಯಕ್ತವಾಗಿದೆ. ಜನಜೀವನ ಎಂದಿನಂತೆ ಇದ್ದು, ಬಸ್‍ಗಳು ಸಂಚಾರ ನಡೆಸುತ್ತಿವೆ. ಅಂಗಡಿ ಮುಂಗಟ್ಟು ತೆರೆದಿತ್ತು ವ್ಯಾಪಾರ ವಹಿವಾಟುಗಳ ಮೇಲೂ ಯಾವುದೇ ಪರಿಣಾಮ ಬಿದ್ದಿಲ್ಲ.

ಬಿಜೆಪಿಯಿಂದ ಸಂಭ್ರಮಾಚರಣೆ: ವಿವಿಧ ಸಂಘಟನೆಗಳು ಕರೆ ನೀಡಿದ ಆಕ್ರೋಶ್ ದಿವಸ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದಲ್ಲಿ ಬಿಜೆಪಿ ಸದಸ್ಯರಿಂದ ಸಂಭ್ರಮಾಚರಣೆ ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ನಂಜುಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳಿಗೆ ಹೂವಿನ ಹಾರ ಹಾಕಿ ಅಭಿನಂದಿಸಿದ ಬಿಜೆಪಿ ಕಾರ್ಯಕರ್ತರು ಸಿಹಿ ವಿತರಿಸಿದರು.

bandh-2

 

Leave a Reply

comments

Related Articles

error: