ದೇಶ

ಸಂಜಯ್ ದತ್ ಬಯೋಗ್ರಫಿ ಬಿಡುಗಡೆ: ಕಾನೂನು ಕ್ರಮಕ್ಕೆ ಮುಂದಾದ ದತ್

ಮುಂಬೈ,ಮಾ.22-ಬಾಲಿವುಡ್ ನಟ ಸಂಜಯ್ ದತ್ ಜೀವನದ ಕುರಿತಾದ ಬಯೋಗ್ರಫಿ ಪುಸ್ತಕವೊಂದು ಬಿಡುಗಡೆಯಾಗಿದ್ದು, ಇದರ ವಿರುದ್ಧ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲು ಸಂಜಯ್ ದತ್ ಮುಂದಾಗಿದ್ದಾರೆ.

ದಿ ಕ್ರೇಜಿ ಅನ್ ಟೋಲ್ಡ್ ಸ್ಟೋರಿ ಆಫ್ ಬಾಲಿವುಡ್ ಬ್ಯಾಡ್ ಬಾಯ್ಎಂಬ ಹೆಸರಿನಲ್ಲಿ ಪುಸ್ತಕವನ್ನು ಜಗ್ಗರ್ ನೌತ್ ಪ್ರಕಟಿಸಿದ್ದು, ಯಾಸೀರ್ ಅಸ್ಮಾನ್ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಸಂಜಯ್ ದತ್ ಬಗ್ಗೆ ಹಲವು ವಿಚಾರಗಳನ್ನು ಬಹಿರಂಗಪಡಿಸಲಾಗಿದೆ.

ಆದರೆ ಬಯೋಗ್ರಫಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಂಜಯ್ ದತ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ನನ್ನ ಬಯೋಗ್ರಫಿ ಬರೆಯಲು ನಾನೂ ಯಾರಿಗೂ ಸೂಚಿಸಿಲ್ಲ. ಪುಸ್ತಕದಲ್ಲಿರುವ ಮಾಹಿತಿ ಎಲ್ಲವೂ ಸುಳ್ಳು. ಯಾವುದೇ ಸಂಶೋಧನೆ ಇಲ್ಲದೆ, ಕೇವಲ ಹಳೆ ಸಂದರ್ಶನಗಳು ಅಥವಾ ಮ್ಯಾಗ್ ಜಿನ್ ಗಳಲ್ಲಿ ಬಂದಂತಹ ಮಾಹಿತಿಯನ್ನ ಒಳಗೊಂಡು ಪುಸ್ತಕ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಸತ್ಯವಿಲ್ಲ. ಹೀಗಾಗಿ, ನನ್ನ ವಕೀಲರ ಬಳಿ ಮಾತನಾಡಿದ್ದು, ಕಾನೂನು ಕ್ರಮಕೈಗೊಳ್ಳುತ್ತೇನೆ ಎಂದಿದ್ದಾರೆ.

ಸಂಜಯ್ ದತ್ ಕಾನೂನು ಕ್ರಮಕೈಗೊಳ್ಳಲು ಮುಂದಾಗುವಂತಹ ವಿಷಯಗಳು ಈ ಪುಸ್ತಕದಲ್ಲಿ ಏನಿವೆ ಎಂಬುದಕ್ಕೆ ಇಲ್ಲಿದೆ ಉತ್ತರ. ನಟಿ ಮಾಧುರಿ ದೀಕ್ಷಿತ್ ಜತೆಗಿನ ಸಂಬಂಧವನ್ನ ಮುಂದುವರಿಸಲು ತನ್ನ ಪತ್ನಿ ರಿಚಾ ಶರ್ಮಾ ಅವರಿಗೆ ಡಿವೋರ್ಸ್ ನೀಡಲು ಮುಂದಾಗಿದ್ದರು ಎಂದು ಬರೆಯಲಾಗಿದೆ.

ಅಲ್ಲದೆ, ಸಂಜಯ್ ದತ್ ಅವರ ತಾಯಿ ತೀರಿಕೊಂಡಾಗ ನಟ ದತ್ ಕಣ್ಣೀರಿಟ್ಟಿರಲಿಲ್ಲವಂತೆ. ಹೀಗಂತ ಪುಸ್ತಕದಲ್ಲಿ ಬರೆಯಲಾಗಿದೆ. ತಾಯಿ ಸಾವಿಗೀಡಾದ ನಂತರ ಸಂಜಯ್ ದತ್ ಅಮೆರಿಕಾದ ಡ್ರಗ್ಸ್ ಪುನರ್ವಸತಿ ಕೇಂದ್ರದಲ್ಲಿದ್ದರು. ಆಗ ತಂದೆ ಸುನಿತ್ ದತ್ ಪತ್ನಿಯ ಕೊನೆಯ ಆಸೆಗಳಿರುವ ಟೇಪುಗಳನ್ನು ಸಂಜಯ್ ದತ್ ಗೆ ಕಳುಹಿಸಿದ್ದರು. ಅದರಲ್ಲಿ ತನ್ನ ಮಗ ಡ್ರಗ್ಸ್ ವ್ಯಸನದಿಂದ ಹೊರಬರಬೇಕೆಂಬುದಿತ್ತು. ಅದನ್ನು ಕೇಳಿ ಸಂಜಯ್ ದತ್ ಗೆ ದುಃಖ ತಡೆಯಲಾಗದೆ ಅತ್ತಿದ್ದರು ಎಂದು ಬಯೋಗ್ರಫಿಯಲ್ಲಿ ತಿಳಿಸಲಾಗಿದೆ.

ಇನ್ನು ಸಂಜಯ್ ದತ್ ಅವರ ಪ್ರತಿಕ್ರಿಯೆಗೆ ಫೇಸ್ ಬುಕ್ ನಲ್ಲಿ ಕ್ಷಮೆ ಕೇಳಿರುವ ಪ್ರಕಟಣೆ ಸಂಸ್ಥೆ ಜಗ್ಗರ್ ನೌತ್ ಪುಸ್ತಕವನ್ನ ಯಾಸ್ಸೀರ್ ಅಸ್ಮಾನ್ ಅವರು ಬರೆದಿದ್ದಾರೆ. ನಿಮ್ಮ ಕುಟುಂಬ ಆಪ್ತರು, ಮತ್ತು ಸ್ನೇಹಿತರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ಅವರು ಕೂಡ ನಿಮ್ಮ ಅಭಿಮಾನಿ. ನಮ್ಮಿಂದ ಬೇಸರವಾಗಿರುವುದಕ್ಕೆ ನಾವು ಕ್ಷಮೆ ಕೇಳುತ್ತೇವೆ ಎಂದಿದೆ. (ಎಂ.ಎನ್)

Leave a Reply

comments

Related Articles

error: