ಕರ್ನಾಟಕಪ್ರಮುಖ ಸುದ್ದಿ

ವ್ಯಕ್ತಿತ್ವ ವೃದ್ಧಿಸಿಕೊಳ್ಳಲು ಕೌಶಲ್ಯ ಅತ್ಯವಶ್ಯಕ: ಪ್ರೊ.ಹಂಪನಹಳ್ಳಿ ತಿಮ್ಮೇಗೌಡ

ಹಾಸನ (ಮಾ.22): ಬದುಕನ್ನು ಕಟ್ಟಿಕೊಳ್ಳಲು, ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಲು ಕೌಶಲ್ಯ ಅತ್ಯವಶ್ಯಕ. ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ಪರಿಣಿತದಲ್ಲಿ ತೊಡಗಿಸಿಕೊಳ್ಳುವುದು ಯುವ ಜನತೆಯ ಗಮನದಲ್ಲಿರುಬೇಕೆಂದು ಜಾನಪದ ತಜ್ಞರು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಹಂಪನಹಳ್ಳಿ ತಿಮ್ಮೇಗೌಡ ಅವರು ಹೇಳಿದರು.

ನಗರದ ಹೇಮಗಂಗೋತ್ರಿ ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಕೋಶ, ಸೆನೆಟ್‍ಭವನ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು ಹಾಗೂ ಹೇಮಗಂಗೋತ್ರಿ, ಸ್ನಾತಕೋತ್ತರಕೇಂದ್ರ, ಹಾಸನ ಇವರ ಸಹಯೋಗದೊಂದಿಗೆ ವೃತ್ತಿ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ಪರ್ಧಾತ್ಮಕ ಪರೀಕ್ಷೆಯಿಂದ ಅಂತರಾಷ್ಟ್ರೀಯ ಮಟ್ಟದವರೆಗೂ ವೃತ್ತಿ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಅತ್ಯವಶ್ಯಕ ಎಂಬುವುದನ್ನು ವಿವಿಧ ಉದಾಹರಣೆ ಮೂಲಕ ಸ್ಪಷ್ಟಪಡಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ಅವರು ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವೃತ್ತಿ ಕೌಶಲ್ಯಗಳ ಬಗ್ಗೆ ಬಹಳಷ್ಟು ಚಿಂತನೆ ನಡೆಸಿದೆ. ಪಠ್ಯಶಿಕ್ಷಣದಷ್ಟೆ ವೃತ್ತಿ ಕೌಶಲ್ಯವು ಮುಖ್ಯ ಎಂಬುದನ್ನು ತಿಳಿಸುತ್ತಾ ಸರ್ಕಾರ ವಿವಿಧ ಯೋಜನೆಗಳ ಮೂಲಕ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಹಾಗೂ ಸ್ವಯಂ ಪ್ರೇರಣೆಯಿಂದ ಬಂದ ಕೌಶಲ್ಯಕ್ಕೆ ಮಹತ್ವವನ್ನು ನೀಡಿ ಬದುಕನ್ನು ಉತ್ತಮಪಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಮೈ.ವಿ.ವಿ ಸಂಯೋಜನಾಧಿಕಾರಿಗಳಾದ ಡಾ.ಬಿ.ವಿ.ಸುರೇಶ್‍ಕುಮಾರ್ ರವರು ಮಾತನಾಡಿ ವಿದ್ಯೆಯ ಜೊತೆಗೆ ವಿವೇಕ ಮತ್ತು ಮಾನವೀಯ ಗುಣವನ್ನು ಬೆಳೆಸಿಕೊಂಡು ಉತ್ತಮ ಕೌಶಲ್ಯ ಅಭಿವೃದ್ಧಿಗೆ ನೆರವಾಗುವಂತೆ ತಿಳಿಸುವುದರ ಮೂಲಕ ಸರ್ಕಾರವು ಕೌಶಲ್ಯಾಭಿವೃದ್ಧಿಗೆ ಮಾಡಿದ ಕೆಲಸದ ಬಗ್ಗೆ ಹಾಗೂ ಹಿಂದುಳಿದ ವರ್ಗಗಳ ಕೋಶದ ಅಗತ್ಯ ಮತ್ತು ಪ್ರಯೋಜನಗಳನ್ನು ತಿಳಿಸಿದರು.

ವೃತ್ತಿ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ತಜ್ಞರಾದ ಶ್ರೀವಿಠಲಪುರ ಜಯರಾಂ, ಕೋಪ, ಭಯ, ಖಿನ್ನತೆ ಮನುಷ್ಯನ ಮನಸನ್ನು ಕುಗ್ಗಿಸಿ ವ್ಯಕ್ತಿತ್ವನ್ನು ನಾಶಮಾಡುವುದರಿಂದ ಅಭಿವೃದ್ಧಿ ಸಾಧಿಸಲಾಗುವುದಿಲ್ಲ. ವ್ಯಕ್ತಿಯ ವ್ಯಕ್ತಿತ್ವ ವಿಕಸನ ಆಗುವುದು ಅಭಿರುಚಿ, ಸಾಮಥ್ರ್ಯ, ಅವಕಾಶಕ್ಕೆ ತಕ್ಕಂತೆ ಕೌಶಲ್ಯಾ ಪಡೆಯುವುದರಿಂದ ವಿಕಸನಗೊಳ್ಳುವುದು ಎಂಬುದರ ಬಗ್ಗೆ ಸೂಕ್ತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಉದ್ಯೋಗ ದೃಷ್ಟಿಯಿಂದ ಅತಿ ಮುಖ್ಯವೆಂದು ತಿಳಿಸುವುದರ ಮೂಲಕ ಕಾರ್ಯೋನ್ಮುಖವಾಗಬೇಕೆಂದು ತಿಳಿಸಿದರು.

ಹೇಮಗಂಗೋತ್ರಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಪುಟ್ಟಸ್ವಾಮಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಕೌಶಲ್ಯ ಎಂಬುದು ಬೇರೆ ಬೇರೆ ವಿಚಾರದಲ್ಲಿ ಅಭಿವೃದ್ಧಿ ಆಗುತ್ತಿದೆಯೆ ಹೊರತು ಉದ್ಯೋಗ ದೃಷ್ಟಿಯಲ್ಲಿ ಆಗುತ್ತಿಲ್ಲ ಇದನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ಮಾತ್ರ ವೃತ್ತಿಯಲ್ಲಿ ವಿಕಸನವಾಗಲು ಸಾಧ್ಯ ಎಂಬುದನ್ನು ತಿಳಿಸಿದರು.

ಸ್ನಾತಕೋತ್ತರಕೇಂದ್ರ, ಹೇಮಗಂಗೋತ್ರಿ, ಡಾ, ದೇವರಾಜು, ವಾಣಿಜ್ಯ ವಿಭಾಗ ಸಹಪ್ರಾಧ್ಯಾಪಕರಾದ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿ ಇವರು ಬದುಕಿನಲ್ಲಿ ಕೌಶಲ್ಯಾಭಿವೃದ್ಧಿಯು ಯಾವ ರೀತಿಯ ಅತಿ ಮುಖ್ಯವಾಗುವುದೆಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೇಂದ್ರದ ಎಂಟು ವಿಭಾಗಗಳ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಅಧ್ಯಾಪಕರು ಮತ್ತು ಅಧ್ಯಾಪಕೇತರರು ಈ ಕಾರ್ಯಗಾರದ ಸದುಪಯೋಗ ಪಡೆದುಕೊಂಡರು.(ಎನ್.ಬಿ)

Leave a Reply

comments

Related Articles

error: