ಮೈಸೂರು

ರಾಜ್ಯಾಭಿಮಾನ ಇಮ್ಮಡಿಗೊಳಿಸಿದ ಹಳೆಯ ಹಾಡುಗಳ ಮೆಲುಕು

ಕನ್ನಡದ ಸುಮಧುರ ಹಾಡುಗಳು ಝೇಂಕರಿಸಿ ನೆರೆದಿದ್ದ ಪ್ರೇಕ್ಷಕರಲ್ಲಿ ನಾಡು-ನುಡಿಯ ಮೇಲಿನ ಪ್ರೇಮ ಹಾಗೂ ಅಭಿಮಾನವನ್ನು ಇಮ್ಮಡಿಗೊಳಿಸಿದ್ದು ಸ್ನೇಹವೃಂದ ಹಾಗೂ ಇತರೆ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವೈಭವದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ.

20161127_200223
ದೀಶ್ನಾ

ಭಾನುವಾರ ಸಂಜೆ ರಾಜ್‍ಕುಮಾರ್ ರಸ್ತೆಯ ಮೌಲಾನ ಆಜಾ಼ದ್ ಕಾಲೇಜು ಪಕ್ಕದ ಆವರಣದಲ್ಲಿ ಸ್ನೇಹವೃಂದ ಹಾಗೂ ಇತರೆ ಸಂಘಟನೆಗಳು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಟೀಚರ್ಸ್ ಕಾಲೋನಿ, ಶಕ್ತಿನಗರ, ಜೆ.ಎಸ್‍.ಎಸ್. ಬಡಾವಣೆ ಹಾಗೂ ಇತರ ಪ್ರದೇಶದ ನಿವಾಸಿಗಳು ಕನ್ನಡ ಹಳೆಹಾಡುಗಳಿಗೆ ತಲೆತೂಗಿದರು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭ ಮಾತನಾಡಿದ ಸಮಾಜ ಸೇವಕ ಮೈಕ್ ಪ್ರಕಾಶ್ ಕನ್ನಡವನ್ನು ಮನೆಯಲ್ಲಿ ಅನುಷ್ಠಾನಗೊಳಿಸಬೇಕು. ಮಮ್ಮಿ-ಡ್ಯಾಡಿ ಸಂಸ್ಕೃತಿ ತೊಲಗಿ ಮಕ್ಕಳಲ್ಲಿ ಭಾಷಾ ಪ್ರೇಮವನ್ನು ಬೆಳೆಸಬೇಕು. ಮನೆಯೇ ಮೊದಲ ಪಾಠಶಾಲೆ ಜನನಿಯೇ ಗುರು ಎನ್ನುವಂತೆ ಮನೆಯಿಂದಲೇ ದೇಶ ಹಾಗೂ ಭಾಷಾ ಪ್ರೇಮವನ್ನು ಸಮರ್ಪಕವಾಗಿ ಮಕ್ಕಳಲ್ಲಿ ಎಳೆವಯಸ್ಸಿನಲ್ಲಿಯೇ ಮೂಡಿಸಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಗಿರಿಧರ್, ಎಸ್.ವೀರಣ್ಣ, ಸಿದ್ದೇಶ್ ಬಾಬು, ಶಕ್ತಿನಗರದ ಮಹಾಬಲರಾಜ್, ವಿದ್ಯಾಶಂಕರ ನಗರದ ಡಾ.ಕಾಂತರಾಜು, ರಾಘವೇಂದ್ರ ನಗರದ ಪ್ರದೀಪ್, ಶಕ್ತಿನಗರದ ಮೆಡಿಕಲ್ ಮಾದೇಶ್, ಸುಭೋದ್, ಕುರುಬರಹಳ್ಳಿಯ ಕ್ಯಾಂಟಿನ್ ರವಿಕುಮಾರ್ ಉಪಸ್ಥಿತರಿದ್ದರು.

ಕೇಳಿಸದೆ ಕಲ್ಲು ಕಲ್ಲಿನಲಿ, ಅಪಾರ ಕೀರ್ತಿ ಪಡೆದ ಭವ್ಯ ನಾಡಿದು.. ಇದೇ ನಾಡು.. ಇದೇ ಭಾಷೆ, ಕಲ್ಲಾದರೆ ನಾನು ಬೇಲೂರಿನ.. ಕನ್ನಡಾಭಿಮಾನದ ಹಾಡುಗಳಿಗೆ ಪ್ರೇಕ್ಷಕರು ಚಪ್ಪಾಳೆ ಸಿಳ್ಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಘವೇಂದ್ರ ರತ್ನಾಕರ್ ವಾದ್ಯಗೋಷ್ಠಿ ತಂಡ ಪ್ರಸ್ತುತಪಡಿಸಿದ ಘಂಟಸಾಲ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜಾನಕಿ ಅವರು ಹಾಡಿರುವ ಹಳೆಯ ಹಾಡುಗಳು ಕೇಳುಗರಿಗೆ ಮುದ ನೀಡಿದ್ದು ಮಾತ್ರವಲ್ಲ ರಾಜ್ಯಾಭಿಮಾನದ ರೋಮಾಂಚನ ಉಂಟುಮಾಡಿದವು. ಜೀ಼ ವಾಹಿನಿಯ ಲಿಟ್ಲ್ ಚಾಂಪ್ಸ್ ಕಲಾವಿದೆಯರಾದ ವಚನ ಎಂ.ಎನ್. ಮತ್ತು  ಹೆಚ್.ಎಸ್. ನಿವೇದಿತಾ ಅವರುಗಳ ಭರತನಾಟ್ಯ ಹಾಗೂ ಆರು ವರ್ಷದ ದೀಶ್ನಾ ಹಾಡಿದ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

dance
ವಚನ ಎಂ.ಎನ್. ಮತ್ತು ಹೆಚ್.ಎಸ್. ನಿವೇದಿತಾ

Leave a Reply

comments

Related Articles

error: