ಕ್ರೀಡೆ

ಮಹಾಜನ ಪುರುಷರ ಟೇಬಲ್ ಟೆನ್ನಿಸ್ ತಂಡಕ್ಕೆ ಪ್ರಥಮ ಸ್ಥಾನ

ಮೈಸೂರು,ಮಾ.22:-  ಮಹಾರಾಜ ಕಾಲೇಜು ಮೈಸೂರು ವತಿಯಿಂದ ನಡೆದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪುರುಷರ ಟೇಬಲ್ ಟೆನ್ನಿಸ್ ತಂಡ ಪ್ರಥಮ ಸ್ಥಾನ ಗಳಿಸಿದೆ.

ನಾಯಕ ಲೌಕಿಕ್  ನಾಯಕತ್ವದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದ ವೈಭವ್, ಪ್ರಸನ್ನ ಗೌಡ, ಹೇಮಂತ್, ಇರ್ಫಾನ್ ಮತ್ತು ಸಚಿನ್ ಅವರನ್ನು  ದೈಹಿಕ ಶಿಕ್ಷಣ ನಿರ್ದೇಶಕ ಡಾ. ಭಾಸ್ಕರ್ ಹೆಚ್ ಎನ್, ಪ್ರಾಂಶುಪಾಲ ಡಾ. ಎಸ್. ವೆಂಕಟರಾಮು, ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ  ಆರ್ ವಾಸುದೇವಮೂರ್ತಿ, ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್. ಎನ್. ಹೆಗಡೆ, ಗೌ. ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ,  ಮುರಳೀಧರ್,  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್ ಆರ್ ರಮೇಶ್,  ದೈಹಿಕ ಶಿಕ್ಷಣ ನಿರ್ದೇಶಕ ಪಿ ಎಸ್. ಮಧುಸೂಧನ ಅಭಿನಂದಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: