ಪ್ರಮುಖ ಸುದ್ದಿಮೈಸೂರು

ಮೈಸೂರಿನಲ್ಲಿ ಬೃಹತ್ ಸಭೆ ನಡೆಸಿ ನಿಮ್ಮ ಸೊಕ್ಕನ್ನು ಮುರಿಯುತ್ತೇನೆ : ಸಿಎಂ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಿಡಿ

ಮೈಸೂರು,ಮಾ.22:- ಮೈಸೂರಿನಲ್ಲಿ ಬೃಹತ್ ಸಭೆ ನಡೆಸಿ ನಿಮ್ಮ ಸೊಕ್ಕನ್ನು ಮುರಿಯುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಮಂಡಿಮೊಹಲ್ಲಾ ಬಳಿ ನಡೆದ ಜೆಡಿಎಸ್ ಸಭೆಯಲ್ಲಿಂದು ಪಾಲ್ಗೊಂಡು  ಮಾತನಾಡಿದ ಅವರು ಸಿ ಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ.ನಡೆಸಿದರು. ಕನಿಷ್ಠ ಪಕ್ಷ ಉಪಕಾರ ಸ್ಮರಣೆ ಇರಬೇಕು. ಮಾಡಿದನ್ನು ನೆನಪಿಸಿಕೊಳ್ಳಬೇಕು. ಅಹಂಕಾರ, ಅಹಂ ಎಲ್ಲಾ ಹೆಚ್ಚಾಗಿ ಹೋಗಿದೆ. ಬಹಳ ದಿನ ಸಿಎಂ ಆಗಿ ಉಳಿಯೋಲ್ಲ ಇವರು ಎಂದು ಕಿಡಿಕಾರಿದರು.

ಮೈಸೂರಿನಲ್ಲಿ  ನಮ್ಮ ಜೆ ಡಿ ಎಸ್ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿದರೆ ಜಿಲ್ಲೆಯ ಎಲ್ಲಾ ಸ್ಥಾನಗಳು ಜೆ ಡಿ ಎಸ್ ಪಾಲಾಗಲಿವೆ. ಈ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಬೃಹತ್ ಸಭೆ ನಡೆಸಿ ನಿಮ್ಮ ಸೊಕ್ಕನ್ನು ಮುರಿಯುತ್ತೇನೆ. ರಂಗಪ್ಪ ನಮ್ಮ ನೆಂಟ ಅಂತ ನಾನು ಪ್ರಚಾರಕ್ಕೆ ಬಂದಿಲ್ಲ. ಅವರೊಬ್ಬ ವಿಜ್ಞಾನಿ. ಚೀನಾದಲ್ಲಿ ಅವರಿಗೆ ಒಳ್ಳೆ ಸ್ಥಾನಮಾನ ಇತ್ತು ಆದರೂ ನಾನೇ ಅವರನ್ನು ರಾಜಕೀಯಕ್ಕೆ ತಂದಿದ್ದೇನೆ. ಮೋದಿ ಅವರಿಗೆ ಗೊತ್ತಿಲ್ಲದೆ ಟೆನ್ ಪರ್ಸೆಂಟ್ ಗೌರ್ಮೆಂಟ್ ಅಂದಿದ್ದಾರೆ. ಆದರೆ ಅದು ಬೇರೇನೆ ಇದೆ. ಮುಂದಿನ ದಿನಗಳಲ್ಲಿ  ಸರ್ಕಾರದ ಭ್ರಷ್ಟಾಚಾರ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಹರಿಹಾಯ್ದರು. ಈ ಸಂದರ್ಭ ಚಾಮರಾಜಕ್ಷೇತ್ರದ ಅಭ್ಯರ್ಥಿ ಪ್ರೊ. ಕೆ.ಎಸ್.ರಂಗಪ್ಪ,ಶಾಸಕ ಜಿ.ಟಿ.ದೇವೇಗೌಡ, ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಹಲವರು ಜೆಡಿಎಸ್ ಗೆ ಸೇರ್ಪಡೆಗೊಂಡರು. ಹಾಸನದಲ್ಲಿ ನಿನ್ನೆ ಹೆಚ್ ಡಿ.ದೇವೇಗೌಡ ಕುಟುಂಬದ ವಿರುದ್ಧ  ಸಿಎಂ ಸಿದ್ದರಾಮಯ್ಯ ಟೀಕಾ ಪ್ರಹಾರ ಮಾಡಿದ್ದಕ್ಕೆ ಇಂದು ಹೆಚ್.ಡಿ.ದೇವೇಗೌಡ ತಿರುಗೇಟು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: