ಮೈಸೂರು

ಸುಪ್ತವಾಗಿರುವ ಕಲೆಯನ್ನು ಹೊರತರುವ ಕೆಲಸವಾಗಬೇಕು: ಜನಾರ್ದನ್

ಕಲೆ ತನ್ನನ್ನು ತಾನು ಅರಿಯಲು ಸಹಕಾರಿಯಾಗುತ್ತದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಹಾಗೂ ರಂಗಕರ್ಮಿ ಎಚ್. ಜನಾರ್ದನ್ ತಿಳಿಸಿದರು.

ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಬದರಿಪ್ರಸಾದ್ ಜಿ ಪದವಿಪೂರ್ವ ಕಾಲೇಜು ಮತ್ತು ಸಿಂಹಸುಬ್ಬಮಹಾಲಕ್ಷ್ಮಿ ಪ್ರಥಮದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಗೀತಾ ಸಂಭ್ರಮ -2016, ಅಂತರ್ ಕಾಲೇಜು ಹಾಗೂ ಪ್ರೌಢಶಾಲೆಗಳ ಸಾಂಸ್ಕೃತಿಕ ಸ್ಪರ್ಧೆಯನ್ನು ಜನಾರ್ದನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಲೆ ಮನುಷ್ಯನಲ್ಲಿ ಸುಪ್ತವಾಗಿರುತ್ತದೆ. ಅದನ್ನು ಹೊರ ತರುವ ಕೆಲಸವಾಗಬೇಕು. ಕಲೆಯು ಮನುಷ್ಯನನ್ನು ಸರ್ವಾಂಗೀಣವಾಗಿ ಪರಿಪೂರ್ಣಗೊಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಗೀತಾ ಶಿಶು ಶಿಕ್ಷಣ ಸಂಘದ ಗೌರವ ಕಾರ್ಯದರ್ಶಿ ವನಜಾ ಬಿ. ಪಂಡಿತ್, ಸಂಸ್ಥೆಯ ಸಂಯೋಜಕ ಬಿ.ಕೆ. ನಟರಾಜು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಗರದ ವಿವಿಧ ಕಾಲೇಜು-ಶಾಲೆಗಳಿಂದ 210 ವಿದ್ಯಾರ್ಥಗಳು ಭಾಗವಹಿಸಿದ್ದರು.

Leave a Reply

comments

Related Articles

error: