ಪ್ರಮುಖ ಸುದ್ದಿಮೈಸೂರು

ಮೋದಿಗೆ ಬೆಂಬಲಿಸಿ ಏಕಾಂಗಿ ಧರಣಿ

ನೋಟು ರದ್ದು ವಿರೋಧಿಸಿ ದೇಶದಾದ್ಯಂತ ವಿರೋಧ ಪಕ್ಷಗಳು ಸೋಮವಾರ (ನ.28) ಆಕ್ರೋಶ್ ದಿನಕ್ಕೆ ಕರೆ ನೀಡಿದ್ದು, ಮೈಸೂರಿನಲ್ಲಿ ವ್ಯಕ್ತಿಯೋರ್ವರು ಮೋದಿಯನ್ನು ಬೆಂಬಲಿಸಿ ಎನ್ನುವ ಫಲಕ ಹಿಡಿದು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೈಸೂರಿನ ಜಿಲ್ಲಾ ನ್ಯಾಯಾಲಯದ ಎದುರು ಇರುವ ಗಾಂಧಿ ಪ್ರತಿಮೆಯ ಮುಂದೆ ಲಷ್ಕರ್ ಮೊಹಲ್ಲಾ ನಿವಾಸಿ, ಸಮಾಜಸೇವಕ ಮನೋಜ್ ಕುಮಾರ್ ಎಂಬವರು ಮೋದಿಯವರನ್ನು ಬೆಂಬಲಿಸಿ ಎಂದು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದು, ಗಮನ ಸೆಳೆದಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಮೋದಿಯವರು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಮೂಲಕ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಅವರ ಈ ಕೆಲಸವನ್ನು ಬೆಂಬಲಿಸಿ ನಾನಿಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಪ್ರತಿಭಟನೆ ನಡೆಸುತ್ತೇನೆ. ಒಳ್ಳೆಯ ಕೆಲಸಗಳಿಗೆ ಯಾವತ್ತೂ ಬೆಂಬಲ ನೀಡಬೇಕು ಎಂದು ತಿಳಿಸಿದರು. ಮನೋಜ್ ಕುಮಾರ್ ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೆ ಕೇವಲ ನೀರನ್ನಷ್ಟೇ ಸೇವಿಸಿ, ಉಪವಾಸ ಪ್ರತಿಭಟನೆ ಕೈಗೊಂಡಿದ್ದಾರೆ.

Leave a Reply

comments

Related Articles

error: