ಸುದ್ದಿ ಸಂಕ್ಷಿಪ್ತ

ಮಾ. 24: ಸೋಪ್ಸ್ ಅಂಡ್‍ ಡಿಟರ್ಜೆಂಟ್ ಲಿಮಿಟೆಡ್‍ನ ಉದ್ಘಾಟನಾ ಸಮಾರಂಭ

ಮೈಸೂರು,ಮಾ.23:-  ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್‍ನ ಉದ್ಘಾಟನಾ ಸಮಾರಂಭವನ್ನು ಮಾರ್ಚ್ 24ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಚಾಮರಾಜೇಂದ್ರ ಮೃಗಾಲಯದ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಗೆ ವೀರೇಶ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕರು ಹಾಗೂ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್‍ನ ಅಧ್ಯಕ್ಷರಾದ ಹೆಚ್.ಆರ್.ಅಲಗೂರು(ರಾಜು), ವ್ಯವಸ್ಥಾಪಕ ನಿರ್ದೇಶಕ ಹರಿಕುಮಾರ್ ಜಾ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅರಣ್ಯ ಮತ್ತು  ಸಂರಕ್ಷಣ ಪ್ರಧಾನ ಮುಖ್ಯಸ್ಥ ರವಿಶಂಕರ್.ಸಿ, ಮಾರುಕಟ್ಟೆ ಮತ್ತು ರಫ್ತು ಪ್ರಧಾನ ವ್ಯವಸ್ಥಾಪಕ ಸಿ.ಎಂ.ಸುವರ್ಣ ಕುಮಾರ್ ಅವರುಗಳು ಮುಖ್ಯ ತಿಥಿಗಳಾಗಿ ಭಾಗವಹಿಸುವರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: