ಮೈಸೂರು

ಕಂಪ್ಯೂಟರ್ ಯಂತ್ರವು ಮಾನವ ನಿರ್ಮಿತವಾಗಿದ್ದು, ಇದಕ್ಕೆ ಯಾವುದೇ ಯೋಚನಾ ಶಕ್ತಿ ಇರುವುದಿಲ್ಲ : ಪ್ರೊ. ಸುರೇಶ್

ಮೈಸೂರು,ಮಾ.23:- ಯುಜಿಸಿ ಪ್ರಾಯೋಜಿತ “ಅಡ್ವಾನ್ಸಡ್ ಟೆಕ್ನಾಲಜೀಸ್ ಇನ್ ಕಂಪ್ಯೂಟರ್ ಸೈನ್ಸ್” ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಗಾರವನ್ನು ನಗರದ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಗಣಕವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ನಿನ್ನೆ ನಡೆದ ಕಾರ್ಯಕ್ರಮವನ್ನು ಮಾನಸಗಂಗೋತ್ರಿ ಗಣಕವಿಜ್ಞಾನ ವಿಭಾಗದ ಪ್ರೊ. ಸುರೇಶ್, ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  ತಂತ್ರಜ್ಞಾನವನ್ನು ಮಾನವನ ಉಪಯೋಗಕ್ಕೆ ಬಳಸಿಕೊಳ್ಳಬೇಕು ಹಾಗೂ ಕಂಪ್ಯೂಟರ್ ಯಂತ್ರವು ಮಾನವ ನಿರ್ಮಿತವಾಗಿದ್ದು, ಇದಕ್ಕೆ ಯಾವುದೇ ಯೋಚನಾ ಶಕ್ತಿ ಹಾಗೂ ಭಾವನೆಗಳು ಇರುವುದಿಲ್ಲ ಎಂದು ತಿಳಿಸಿದರು.

ವಿನೀತಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬಾಲರಾಜು ಎಸ್, ಟೆಕ್ನಿಕಲ್ ಲೀಡರ್, ಥಿಯರ್ಸಂ, ಮೈಸೂರು ಇವರನ್ನು ಸಭೆಗೆ ಪರಿಚಯಿಸಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ. ಬಿ. ವಿ. ಸಾಂಬಶಿವಯ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ  Advanced Technologies  like Deep learning, Digital Currencies, Industrial IOT, Robotics, Assisted Transportation, Cyber Security and AI, Behaviour Analysis using Psychograph ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಕಾರ್ಯಕ್ರಮದಲ್ಲಿ ಐಶ್ವರ್ಯ ಪ್ರಾರ್ಥಿಸಿದರೆ, ಪ್ರಾಂಶುಪಾಲರಾದ ಪ್ರೊ. ಎಂ. ಮಹದೇವಪ್ಪನವರು ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥರಾದ ವೈ ಎಸ್ ಸುಮನಶ್ರೀ ವಂದಿಸಿದರು. ಸಿಂಚನ  ನಿರೂಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: