ಮೈಸೂರು

ಭಗತ್ ಸಿಂಗ್,ಸುಖದೇವ್,ರಾಜಗುರು ಅವರ ಹುತಾತ್ಮ ದಿನಾಚರಣೆ : ಪುಷ್ಪಾರ್ಚನೆ

ಮೈಸೂರು,ಮಾ.23:- ಭಗತ್ ಸಿಂಗ್,ಸುಖದೇವ್,ರಾಜಗುರು ಅವರ ಹುತಾತ್ಮ ದಿನಾಚರಣೆಯನ್ನು ಯುವ ಭಾರತ್ ಸಂಘಟನೆ ಮತ್ತು ತ್ರಿವೇಣಿ ಗೆಳೆಯರ ಬಳಗದ ವತಿಯಿಂದ ನರಸಿಂಹ ರಾಜ ಮೊಹಲ್ಲಾದ ತ್ರಿವೇಣಿ ವೃತ್ತದಲ್ಲಿ ಪುಷ್ಪಾರ್ಚನೆ ಮಾಡಿ ಆಚರಣೆ ಮಾಡಲಾಯಿತು.

ಸಂಘಟನೆಯ ನೂರಾರು ಪಧಾದಿಕಾರಿಗಳು ಜಮಾವಣೆ ಗೊಂಡು 83 ನೇ ವರ್ಷದ ಹುತಾತ್ಮ ದಿನ ವನ್ನು ರಾಷ್ಟ್ರೀಯ ಕರಾಳ ದಿನಾಚರಣೆಯನ್ನಾಗಿ ಆಚರಣೆ ಮಾಡಬೇಕೆಂದು ಒಕ್ಕೊರಲಿನಿಂದ ಜಿಂದಾಬಾದ್ ಎಂಬ ಘೋಷಣೆ ಕೂಗುವ ಮೂಲಕ ಭಗತ್ ಸಿಂಗ್ ರನ್ನು ನೆನಪಿಸಿದರು.

ಪುಷ್ಪಾರ್ಚನೆ ಮಾಡಿ ಮಾತನಾಡಿದ ರಾಜ್ಯ ಪರಿಷತ್ ನ ಸದಸ್ಯರಾದ ಆನಂದ್, ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಉಳಿವಿಗಾಗಿ ಶಾಂತಿಯುತ ವಾಗಿ ಒಂದು ತಂಡ ಇದ್ದರೇ ಕ್ರಾಂತಿಕಾರಿಯಾಗಿ ಒಂದು ತಂಡ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿ ಸ್ವಾತಂತ್ರ್ಯ ಪಡೆಯಿತು. ಈ ನಿಟ್ಟಿನಲ್ಲಿ ಬ್ರಿಟಿಷರು ನಡೆಸುವ ಹಿಂದೂಗಳ ಮಾರಣಹೋಮವನ್ನು ಧಿಕ್ಕರಿಸಿ ಭಗತ್ ಸಿಂಗ್ ಅವರ ಕುಟುಂಬ ಪಣ ತೊಟ್ಟಿತು. ಅತಿ ಹೆಚ್ಚು ಪರಿಣಾಮ ಬೀರಿದ್ದು ಜಲಿಯಾನ್ ವಾಲಿಬಾಗ್ ನ ಘಟನೆ ,ಇದೆ ರೀತಿಯಲ್ಲಿ ಮುಂದುವರೆದ ಬ್ರಿಟಿಷರ ಅಂತ್ಯ ಮಾಡಲು ಪಾರ್ಲಿಮೆಂಟ್ ನ ಕೆಂಪು ಕೋಟೆ ಯ ಮೇಲೆ ಬಾಂಬ್ ದಾಳಿ ಮಾಡಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ , ಜಿಂದಾ ಬಾದ್ ಎಂಬ ಘೊಷಣೆ ಎಂಬ ವಾಕ್ಯದಲ್ಲಿ ಹೋರಾಟ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಕೇವಲ 23 ವರ್ಷದ ಯುವಕರಾಗಿದ್ದ ಅವರವನ್ನು  ಮಾರ್ಚ್ 23 ರಂದು ಬಲಿದಾನ ಮಾಡಿದ ದಿನವನ್ನು ನಮ್ಮ ರಾಷ್ಟ್ರದ ಕರಾಳ ದಿನ ಎಂದು ಹಿಂದೂ ದೇಶಭಕ್ತರ ದಿನವೆಂದು ಘೋಷಣೆ ಮಾಡಬೇಕೆಂದು ಕೋರಲಾಯಿತು ಎಂದರು.

ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರು ಅನಿಲ್ ಥಾಮಸ್, ರಾಜ್ಯ ಪರಿಷತ್ ಸದಸ್ಯರಾದ ರಮೇಶ್  ಬಿ ಆನಂದ,ಯುವ ಭಾರತ್ ಸಂಘಟನೆಯ ಜೋಗಿ ಮಂಜು ನಂದಕುಮಾರ .ಮುರಳಿ.ರೇಣುಕಾ. ಗೋವಿಂದ. ಮುಕೇಶ್. ಸುರೇಶ ರಾಜ್.ಲೊಹಿತ್ .ಯತಿರಾಜ್ .ಗುರು ಸಂತೊಷ. ಪೇಪರ್ ಸೋಮು .ಬಾಲು.ಶ್ರೀನಿವಾಸ್. ರಂಜನ್ ರವಿಕಾಂತ್. ಮಹೇಶ್. ಶಂಕರ್ ಇತರರಿದ್ದರು. ಇದೇ ವೇಳೆ ರಾಮಸ್ವಾಮಿ ವೃತ್ತದಲ್ಲಿಯೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್ ವತಿಯಿಂದ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ರಾಮಸ್ವಾಮಿ ವೃತ್ತದಲ್ಲಿ ಭಗತ್ ಸಿಂಗ್ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನ ನಡೆಯಿತು. ಅಜಯ್ ಕಾಮತ್, ಬಿ.ರವಿ, ಬಸವರಾಜು, ಆಕಾಶ್, ಆಸಿಯಾ ಬೇಗಂ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: