ಮೈಸೂರು

ಯುವ ಬ್ರಿಗೇಡ್ ನಿಂದ ಸಂಭ್ರಮಾಚರಣೆ

ನೋಟು ರದ್ದು ವಿರೋಧಿಸಿ ದೇಶಾದ್ಯಂತ ವಿರೋಧ ಪಕ್ಷಗಳು ಆಕ್ರೋಶ್ ದಿನಕ್ಕೆ ನವೆಂಬರ್ 28ರಂದು ಕರೆ ನೀಡಿದ್ದರೆ, ಮೈಸೂರಿನಲ್ಲಿ ಯುವ ಬ್ರಿಗೇಡ್ ಸಂಭ್ರಮದ ದಿನವನ್ನಾಚರಿಸಿದೆ.

ಮೈಸೂರಿನ ವಾಣಿವಿಲಾಸ ಮೊಹಲ್ಲಾದ ಅಂಚೆಕಚೇರಿಗೆ ತೆರಳಿದ ಮೈಸೂರಿನ ಯುವ ಬ್ರಿಗೇಡ್ ಕಾರ್ಯಕರ್ತರು ಅಲ್ಲಿನ ಸಿಬ್ಬಂದಿಗಳಿಗೆ ಹೂ ಹಾಗೂ ಸಿಹಿಯನ್ನು ನೀಡಿ ಸಂಭ್ರಮವನ್ನಾಚರಿಸಿದರು. ಈ ಸಂದರ್ಭ ಮಾತನಾಡಿದ ಕಾರ್ಯಕರ್ತರು 500 ಹಾಗೂ 1000 ರೂ. ಮುಖಬೆಲೆಯ ನೋಟನ್ನು ರದ್ದು ಮಾಡಿದ ಸಂದರ್ಭ ಅಂಚೆ ಕಚೇರಿಯ ಸಿಬ್ಬಂದಿಗಳು ಸಾರ್ವಜನಿಕರಲ್ಲಿ ಸ್ವಲ್ಪವೂ ಬೇಸರಿಸದೇ ಸಹಕರಿಸಿದ್ದಾರೆ. ಅದರಿಂದ ಅವರಿಗೆ ನಾವು ಸಂಭ್ರಮಾಚರಣೆಯ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದರು.

Leave a Reply

comments

Related Articles

error: