ಕರ್ನಾಟಕ

ಹಣವಿದ್ದ ವ್ಯಾನ್‍ನೊಂದಿಗೆ ಚಾಲಕ ಪರಾರಿ ಪ್ರಕರಣ: ಪತ್ನಿ ಎಲ್ವಿನ್‍ ಬಂಧನ

ಎಟಿಎಂ ಘಟಕಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಖಾಸಗಿ ಕಂಪನಿಯ ಚಾಲಕನೊಬ್ಬ ಹಣವಿದ್ದ ವಾಹನದೊಂದಿಗೆ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಆರೋಪಿ ಚಾಲಕನ ಪತ್ನಿ ಎಲ್ವಿನ್‍ರನ್ನು ಬಂಧಿಸಿದ್ದಾರೆ.

ಚಾಲಕ ಡಾಮ್ನಿಕ್ ಪತ್ನಿ ಎಲ್ವಿನ್ ಅವರು ನಗರದ ಬಾಣಸವಾಡಿ ಮನೆಯೊಂದರಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ರಾತ್ರಿ ದಿಢೀರ್ ದಾಳಿ ಮಾಡಿ ಪತ್ನಿ ಎಲ್ವಿನ್‍ರನ್ನು ಬಂಧಿಸಿ, ಅವರ ಬಳಿಯಿದ್ದ ಸುಮಾರು 79.8 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. 12 ಲಕ್ಷ ಹಣದೊಂದಿಗೆ ಡಾಮ್ನಿಕ್ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಕಾಕ್ಸ್‍ಟೌನ್ ರಸ್ತೆಯ ‘ಲಾಜಿ ಕ್ಯಾಷ್ ಮ್ಯಾನೇಜ್‍ಮೆಂಟ್ ಕಂಪನಿ’ಯು ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆಯನ್ನು ಪಡೆದಿದ್ದು, ಕಳೆದ ವಾರ ಕೆಜಿ ರಸ್ತೆಯಲ್ಲಿರುವ ವಿವಿಧ ಬ್ಯಾಂಕುಗಳಿಗೆ ಹಣ ತುಂಬಿಸಲು ಸಿಬ್ಬಂದಿಯನ್ನು ಕಳುಹಿಸಿತ್ತು. ಈ ವೇಳೆ ಚಾಲಕ ಡೊಮ್ನಿಕ್ 1.37 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದ. ಮರುದಿನ ಮೌಂಟ್‍ ಕಾರ್ಮೆಲ್ ಕಾಲೇಜು ಬಳಿ ವಾಹನ ಪತ್ತೆಯಾಗಿದ್ದು, ಅದರಲ್ಲಿ 45 ಲಕ್ಷ ರೂ. ಸಿಕ್ಕಿತ್ತು. ಉಳಿದ 92 ಲಕ್ಷ ರೂ.ನೊಂದಿಗೆ ಆತ ಪರಾರಿಯಾಗಿದ್ದ.

Leave a Reply

comments

Related Articles

error: