ಮೈಸೂರು

ಹಸೆಮಣೆ ಏರಬೇಕಿದ್ದ ಯುವಕ ನೇಣಿಗೆ ಶರಣು

ಮೈಸೂರು,ಮಾ.23:-  ಹಸೆಮಣೆ ಏರಬೇಕಿದ್ದ  ಯುವಕ ನೇಣಿಗೆ ಶರಣಾದ ಘಟನೆ  ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.

ಮೃತನನ್ನು ದೀಪಕ್ (23)ಎಂದು ಗುರುತಿಸಲಾಗಿದ್ದು, ಈತ ಕ್ಯಾತಮಾರನಹಳ್ಳಿಯ ಅನಿತಾ ಎಂಬ ಯುವತಿಯನ್ನ ಪ್ರೀತಿಸಿದ್ದ. ಮದುವೆ ಆಗುವಂತೆ ಅನಿತಾ ಹಾಗೂ ಪೋಷಕರು ದೀಪಕ್ ಮೇಲೆ ಒತ್ತಡ ಹೇರುತ್ತಿದ್ದರು. ಉದಯಗಿರಿ ಪೊಲೀಸ್ ಠಾಣೆಗೆ ಕರೆತಂದು ದೀಪಕ್ ಮದುವೆಯಾಗುತ್ತಾನೆಂಬುದನ್ನು  ಅನಿತಾ ಮನೆಯವರು ಖಚಿತಪಡಿಸಿಕೊಂಡಿದ್ದರು. ಮದುವೆ ದಿನಾಂಕ ನಿಶ್ಚಯಿಸುವಂತೆ  ಅನಿತಾ ಮನೆಯವರು ದೀಪಕ್ ಗೆ  ಒತ್ತಡ ಹೇರಿದ್ದರು. ಒತ್ತಡ ಹಾಗೂ ಕಿರುಕುಳಕ್ಕೆ ಬೇಸತ್ತ  ದೀಪಕ್ ನೇಣಿಗೆ ಶರಣಾಗಿದ್ದಾನೆ. ಅನಿತಾ ಹಾಗೂ ಆಕೆಯ ಪೋಷಕರ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: