ಸುದ್ದಿ ಸಂಕ್ಷಿಪ್ತ

ನಾಳೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಷನ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ ವಾರ್ಷಿಕ ಘಟಿಕೋತ್ಸವ

ಮೈಸೂರು,ಮಾ.23:- ಮೈಸೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಷನ್ ಫಾರ್ ಮ್ಯಾನೇಜ್ ಮೆಂಟ್  ಡೆವಲಪ್ ಮೆಂಟ್ ಸಂಸ್ಥೆಯ ಇಪ್ಪತ್ತಮೂರನೆಯ ವಾರ್ಷಿಕ ಘಟಿಕೋತ್ಸವವು, ಚಾಮುಂಡಿ ಬೆಟ್ಟದ ರಸ್ತೆಯಲ್ಲಿರುವ ಸಂಸ್ಥೆಯ ಆವರಣದಲ್ಲಿ ಮಾರ್ಚ್ 24, (ನಾಳೆ) ಸಂಜೆ ನಾಲ್ಕು ಘಂಟೆಗೆ ನಡೆಯಲಿದೆ.

ಎನ್. ಎಸ್. ವಿಶ್ವನಾಥನ್, ಡೆಪ್ಯುಟಿ ಗವರ್ನರ್, ಭಾರತೀಯ ರಿಸರ್ವ್ ಬ್ಯಾಂಕ್, ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದು, ಘಟಿಕೋತ್ಸವ ಭಾಷಣವನ್ನುಮಾಡಲಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪೋಸ್ಟ್ ಗ್ರಾಜ್ಯುವೇಟ್ ಡಿಪ್ಲೊಮಾ ಇನ್ ಮ್ಯಾನೇಜ್ ಮೆಂಟ್ 2016-18 ಬ್ಯಾಚ್ನ ಅರ್ಹ ವಿದ್ಯಾರ್ಥಿಗಳಿಗೆ, ಸಂಸ್ಥೆಯು ಈಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಿದೆ. ವಿವಿಧ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದವರು ಹಾಗೂ ಎರಡೂ ವರ್ಷಗಳಲ್ಲಿ ಶ್ರೇಷ್ಠ ಶ್ರೇಣಿಗಳನ್ನು ಪಡೆದ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾದ. ಎನ್. ಎಸ್. ವಿಶ್ವನಾಥನ್ ಅವರಿಂದ ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ. ಸಂಸ್ಥೆಯನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್ ಅವರು 2017-18 ಸಾಲಿನ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಲಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಲಹಾ ಮಂಡಳಿಯ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. (ಜಿ.ಕೆ,ಎಸ್ಎಚ್)

Leave a Reply

comments

Related Articles

error: