ಮೈಸೂರು

ಶಾಲಾ ಯುವತಿಯರಿಗೆ ಸ್ವ-ರಕ್ಷಣೆ ತರಬೇತಿ ಕಾರ್ಯಾಗಾರ

ಹೆಣ್ಣು ಮಕ್ಕಳ ರಕ್ಷಣೆ ಮತ್ತು ಲೈಂಗಿಕ ಕಿರುಕುಳ ತಡೆಗಟ್ಟುವ ನಿಟ್ಟಿನಲ್ಲಿ ಹೊಸಪೇಟೆ ಮೂಲದ ಬಲ್ಡೋಟ ಸಮೂಹ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ವಿಭಾಗದಿಂದ ಅತ್ಯಾಚಾರ ಮತ್ತು ಮಹಿಳಾ ಶೋಷಣೆ ವಿರೋಧಿ ಜಾಗೃತಿಗಾಗಿ ಯುವತಿಯರಿಗೆ ಸ್ವಯಂ ರಕ್ಷಣೆ ತರಬೇತಿ ಕಾರ್ಯಾಗಾರವನ್ನು ನೀಡಲಾಗುವುದು ಎಂದು ಸಂಸ್ಥೆಯ ಅನುರಾಧ ತಿಳಿಸಿದರು.

ಅವರು, ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.28 ರಿಂದ ಡಿ.10 ರ ವರಗೆ ಮೈಸೂರಿನಲ್ಲಿ ವಿವಿಧ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಕಾರ್ಯಾಗಾರವನ್ನು ನೀಡಲಾಗುತ್ತಿದ್ದು, ಶಾಲೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಬಗ್ಗೆ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಯುವತಿಯರಿಗೆ ಕಾನೂನಾತ್ಮಕ ಜಾಗೃತಿ ಮೂಡಿಸಲು ಸ್ವಯಂ ರಕ್ಷಣೆಯ ಟ್ರಿಕ್‍ಗಳನ್ನು ತಿಳಿಸಲಾಗುವುದು.

ವಾಮಾ ಬಲ್ಡೋಟ ಅವರು ಡೇರ್ (ಡಿಫೆನ್ಸ್ ರೇಫ್ ಅಂಡ್ ಈವ್ ಟೀಸಿಂಗ್) ಹೆಸರಿನಲ್ಲಿ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ನಾಲ್ಕು ಜನ ತರಬೇತಿದಾರರನ್ನು ಹೊಂದಿದೆ. ತಂಡವು ಈಗಾಗಲೇ ರಾಜ್ಯದಲ್ಲಿ ಸುಮಾರು ಇಪ್ಪತ್ತು ಜಿಲ್ಲೆಗಳಲ್ಲಿ ಸಂಚರಿಸಿ ತರಬೇತಿ ಕಾರ್ಯಾಗಾರವನ್ನು ನೀಡಿದೆ. ತರಬೇತಿಯಲ್ಲಿ ಮಾರ್ಷಲ್ ಆರ್ಟ್ಸ್ ಹಾಗೂ ಮನೋಧೈರ್ಯದ ತರಬೇತಿ ನೀಡಲಿದ್ದು, ಅಪಾಯ ಬಂದೊದಗಿದಾಗ ಇಂತಹ ಟ್ರಕ್‍ಗಳು ಉತ್ತಮ ಫಲಿತಾಂಶ ನೀಡುವವು. ತರಬೇತಿಯು ಕೇವಲ ಎರಡು ಗಂಟೆ ಕಾಲಾವಧಿಯಾಗಿದ್ದು ಸ್ವಯಂ ರಕ್ಷಣೆಗೆ ಉಪಕಾರಿ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಲ್ಮಾ ಕೌಸರ್, ಸವಿತಾ, ರೇವತಿ ಇದ್ದರು.

Leave a Reply

comments

Related Articles

error: