ಕರ್ನಾಟಕ

ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಶ: ಹೊತ್ತಿ ಉರಿದ ಪಲ್ಲಕ್ಕಿ!

ಕೋಲಾರ,ಮಾ,23: ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಶವಾಗಿ ಪಲ್ಲಕ್ಕಿ ಹೊತ್ತಿ ಉರಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಕಳೆದ ರಾತ್ರಿ ನಡೆದಿದೆ.

ಬೇತಮಂಗಲದಲ್ಲಿ ಶ್ರೀವಿಜಯೇಂದ್ರಸ್ವಾಮಿ ಜಾತ್ರೆ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಲೆ ವಿದ್ಯುತ್ ತಂತಿ ತಗುಲಿ ಪಲ್ಲಕ್ಕಿ ಹೊತ್ತಿ ಉರಿದಿದೆ. ಇದರಿಂದ ಗಾಬರಿಗೊಂಡ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಸಮಯಪ್ರಜ್ಞೆ ಮೆರೆದ ಕೆಲವರು ಕೂಡಲೇ ವಿದ್ಯುತ್ ಕಡಿತಗೊಳಿಸಿದ್ರು. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಇದು ವಿಜಯೇಂದ್ರ ಸ್ವಾಮಿ ಭಕ್ತರದಲ್ಲಿ ಆತಂಕಕ್ಕೆ ಕಾರಣವಾಯಿತು. (ವರದಿ; ಪಿ.ಎಸ್ )

Leave a Reply

comments

Related Articles

error: