ಸುದ್ದಿ ಸಂಕ್ಷಿಪ್ತ

ನಾಳೆ ಗಂಧದ ಉರುಸ್ : ಕ್ವಾಜಾ -ಕಿ-ಛಟಿ

ಮೈಸೂರು,ಮಾ.23 : ರಾಜಸ್ಥಾನದ ಹಜರತ್ ಕ್ವಾಜಾ ಮೊಯಿನುದ್ದೀನ್ ಚಿಸ್ಟಿ ಅಜ್ಮೀರ್ ಷರೀಫ್ 806ನೇ ವಾರ್ಷಿಕ ಗಂಧದ ಉರುಸ್ ಷರೀಪ್ ಅಂಗವಾಗಿ ಕ್ವಾಜಾ-ಕಿ-ಛಟಿ ಮತ್ತು ಮೆಹಫಿಲ್ –ಇ-ಸಮಾಖಾನಿ (ಖವ್ವಾಲಿ) ಆಚರಣೆಯನ್ನು ಮಾ.24ರಂದು ಆಯೋಜಿಸಿದೆ.

ನಂ.203, ಅಸ್ತಾನ್ – ಇ-ಕ್ವಾಜಾ  ಎ-.ಬ್ಲಾಕ್  ಗೌಸಿಯಾ ನಗರದಲ್ಲಿ ಆಯೋಜಿಸಿದೆ. ಕ್ವಾಜಾ ಭಲಾರ್ ಅಲಿ ಷಾ ಚಿಸ್ಟಿ, ಬನಾವಾ ಅಧ್ಯಕ್ಷತೆ ವಹಿಸುವರು.  ಸೂಫಿ ಸಂತ ಡಾ.ಮೌಲಾನಾ ಸೈಯದ್ ಷಾ, ರಸೂಲ್ ಖಾಲಿದ್ ಜೀಲಾನಿ, ಅಲ್ ವಸಾಲಾ ಕೈಸರ್ ಮುಡ್, ಮಿಶಾಹಿಕ್ , ತನ್ ಜೀಮ್ ಅಹಲೆ ಸುನ್ನತೋ ಜಮಾತ್ ಪದಾಧಿಕಾರಿಗಳು ಭಾಗಿಯಾಗುವರು.

ಬೆಳಗ್ಗೆ 6.30ಕ್ಕೆ ಖುರಾನ್ ಪಠಣ, 10ಕ್ಕೆ ಆಲಂ ಖುಶಾಯಿ, 11 ಗಂಟೆಗೆ ಸೂಫಿ ಸಮ್ಮೇಳನ, 2.30ಕ್ಕೆ ಮೆರವಣಿಗೆ, ಸಂಜೆ 7 ಗಂಟೆಗೆ ಫಾತೆಹಾ ಖಾನಿ ಜರುಗಲಿದೆ. 9.30ಕ್ಕೆ ಆಂದ್ರ ಪ್ರದೇಶದ ಖವ್ವಾಲಿ ಕಲಾವಿದ ಜಹೀರ್ ಚಿಸ್ಟಿ ತಂಡದಿಂದ ಖವ್ವಾಲಿ ಕಾರ್ಯಕ್ರಮ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: