ಸುದ್ದಿ ಸಂಕ್ಷಿಪ್ತ
ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ಉದ್ಘಾಟನೆ .25.
ಮೈಸೂರು,ಮಾ.23 : ವಿಜಯನಗರದ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ಉದ್ಘಾಟನೆಯನ್ನು ಮಾ.25ರ ಬೆಳಗ್ಗೆ 11 ಗಂಟೆಗೆ ಆಯೋಜಿಸಿದೆ.
ಆದಿಚುಂಚನಗಿರಿ ಶಾಖಾಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಶಾಸಕ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜ್, ಜಿ.ಪಂ.ಸದಸ್ಯ ರಾಕೇಶ್ ಪಾಪಣ್ಣ, ಹಿನಕಲ್ ಗ್ರಾ.ಪಂ ಸದಸ್ಯ ಚೆಕ್ಯ ರವಿಕುಮಾರ್ ಮತ್ತಿರರು ಭಾಗಿಯಾಗುವರು. (ಕೆ.ಎಂ.ಆರ್)