ಮೈಸೂರು

ನಾಡಪ್ರಭು ಕೆಂಪೇಗೌಡ ಯುವಕ ಸಂಘದ ಪ್ರಥಮ ವಾರ್ಷಿಕೋತ್ಸವ ಡಿ.4ರಂದು

ಕಸಬಾ ಹೋಬಳಿ ಗಳಿಗರಹುಂಡಿಯ ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ಪ್ರಥಮ ವರ್ಷದ ವಾರ್ಷಿಕೋತ್ಸವವನ್ನು ಡಿ.4 ರಂದು ಸಂಜೆ 5 ಗಂಟೆಗೆ, ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಆಡಳಿತಾಧಿಕಾರಿ ಚೇತನ್ ಎಸ್. ತಿಳಿಸಿದರು.

ಅವರು ಸೋಮವಾರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಮಾರಂಭವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸುವರು. ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು. ಆದಿಚುಂಚುನಗಿರಿ ಮಠದ ಸೋಮನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಶಾಸಕ ಸಾ.ರಾ. ಮಹೇಶ್, ಜಿಪಂ ಸದಸ್ಯರಾದ ಮಾದೇಗೌಡ, ಪುಟ್ಟತಾಯಮ್ಮ, ಹಂಚ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಇತರರು ಉಪಸ್ಥಿತರಿರುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಪ್ರಸನ್ನ ಎಂ, ಗೌರವಾಧ್ಯಕ್ಷ ಪಾಪಣ್ಣ, ಉಪಾಧ್ಯಕ್ಷ ವೆಂಕಟೇಶ್ ಬಿ, ನಿರ್ದೇಶಕರಾದ ನಾಗೇಂದ್ರ ಎಂ, ರಾಘವೇಂದ್ರ ಎನ್. ಉಪಸ್ಥಿತರಿದ್ದರು.

Leave a Reply

comments

Related Articles

error: