ಸುದ್ದಿ ಸಂಕ್ಷಿಪ್ತ

ಆರ್ ಎಲ್ ಹೆಚ್.ಪಿ : ನಾಳೆ ಮಹಿಳಾ ದಿನಾಚರಣೆ

ಮೈಸೂರು,ಮಾ.23 : ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಭೀಮನಬೀಡು ಗ್ರಾ.ಪಂ ಸಹಯೋಗದಲ್ಲಿ ಮಹಿಳಾ ದಿನಾಚರಣೆಯನ್ನು ಮಾ.24ರಂದು ದುದ್ದಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದೆ.

ಬೆಳಗ್ಗೆ 1130ಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್ ಅವರಿಂದ ಉದ್ಘಾಟನೆ. ಗ್ರಾ.ಪಂ ಅಧ್ಯಕ್ಷೆ ರಾಜಮ್ಮ ಅಧ್ಯಕ್ಷತೆ. ರೈತ ನಾಯಕಿ ಸುನಂದ ಜಯರಾಮ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರಾಧ ಮತ್ತು ಗ್ರಾ.ಪಂ ಸದಸ್ಯರು ಭಾಗವಹಿಸುವರು. ನಂತರ ಸಾಧಕರಿಗೆ ಸನ್ಮಾನ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: