ಸುದ್ದಿ ಸಂಕ್ಷಿಪ್ತ

ನಾಳೆ ವಿದ್ಯಾವರ್ಧಕ ಕಾಲೇಜಿನಲ್ಲಿ ವಿಚಾರ ಸಂಕಿರಣ

ಮೈಸೂರು,ಮಾ.23 : ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಿಂದ ‘ಭಾರತದಲ್ಲಿ ಉದ್ಯಮಶೀಲತೆಯ ಅಭಿವೃದ್ಧಿ : ಸಮಸ್ಯೆಗಳು ಹಾಗೂ ಸವಾಲುಗಳು’ ವಿಷಯವಾಗಿ ರಾಷ್ಟ್ರೀಯಮಟ್ಟದ ವಿಚಾರ ಸಂಕಿರಣವನ್ನು ನಾಳೆ ಬೆಳಗ್ಗೆ 9.30ರಿಂದ ಆಯೋಜಿಸಿದೆ.

ಉದ್ಘಾಟಕರಾಗಿ ಬೆಂಗಳೂರಿನ ಕ್ವೀನ್ಸ್ ಗ್ಲೋಬಲ್ ಮ್ಯಾನೇಜ್ಮೆಂಟ್ ಸಲ್ಯೂಷನ್ಸ್ ಸ್ಥಾಪಕ ನಿರ್ದೇಶಕಿ ಡಾ.ಮಧುರಾಣಿ ಆಗಮಿಸುವರು. ಕೊಯಮತ್ತೂರಿನ ಉದ್ಯಮಿ ಬಿ.ಚಂದ್ರಶೇಖರ್ ಇರುವರು.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ, ಯುವ ಉದ್ಯಮಿ ಛಾಯಾ ನಂಜಪ್ಪ ರಾಜಪ್ಪ, ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಪ್ರಾಚಾರ್ಯ ಡಾ.ಎಸ್.ಮರೀಗೌಡ ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: