
ಮೈಸೂರು
ರೈಲ್ವೆ ಗೂಡ್ಸ್ ಶೆಡ್ ಲಾರಿ ಚಾಲಕರಿಂದ ಪ್ರತಿಭಟನೆ
ಕೇಂದ್ರ ಸರಕಾರದ ನೋಟು ಅಮಾನ್ಯವನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ರೈಲ್ವೆ ಗೂಡ್ಸ್’ಶೆಡ್ ಲಾರಿ ಮಾಲೀಕರು ಮತ್ತು ಚಾಲಕರು ಬೆಂಬಲ ಸೂಚಿಸಿದರು. ರೈಲ್ವೆ ಗೂಡ್ಸ್ ಶೆಡ್ ಸರಕು ಸಾಗಣೆಯನ್ನು 2 ದಿನ ಸ್ಥಗಿತಗೊಳಿಸುವುದಾಗಿ ಘೋಷಿಸಿದರು.
ಹೈವೆ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಚಾಲಕರು, ನೋಟು ರದ್ದಿನಿಂದ ತಮಗಾಗುತ್ತಿರುವ ತೊಂದರೆಯಿಂದ ಈ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ಕಾಳಧನದ ವಿರುದ್ಧ ಹೋರಾಡಲು ಕೈಗೊಂಡಿರುವ ಈ ನಿರ್ಧಾರಕ್ಕೆ ಸ್ವಾಗತ. ನಾವು ಮೋದಿಯವರೊಂದಿಗೆ ಇದ್ದೇವೆ. ಆದರೆ, ಕಳೆದ 15 ದಿನಗಳಿಂದ ನಮಗೆ ಜೀವನ ನಡೆಸುವುದು ಕಷ್ಟವಾಗಿದೆ. ನಾವು ಕೆಲಸ ಮಾಡುತ್ತಿದ್ದೇವೆ. ಆದರೆ, ನಮಗೆ ಇನ್ನೂ ಸಂಬಳ ಸಿಕ್ಕಿಲ್ಲ. ಚೆಕ್ ಕೊಟ್ಟರೆ ದುಡ್ಡು ಪಡೆಯುವುದರಲ್ಲಿ ವಿಳಂಬವಾಗುತ್ತಿದೆ. ತುತ್ತು ಅನ್ನಕ್ಕೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ನಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ಮನವಿ ಮಾಡಿದರು.