ಮೈಸೂರು

ಪ್ರಜ್ಞಾವಂತ ನಾಗರೀಕ ವೇದಿಕೆಯಿಂದ ಬಲಿದಾನ್ ದಿವಸ್ ಆಚರಣೆ

ಮೈಸೂರು,ಮಾ.23-ಪ್ರಜ್ಞಾವಂತ ನಾಗರೀಕ ವೇದಿಕೆ ವತಿಯಿಂದ ನಗರದ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ಸರ್ಕಲ್) ದಲ್ಲಿ ಶುಕ್ರವಾರ ಬಲಿದಾನ್ ದಿವಸ್ ಅನ್ನು ಆಚರಿಸಲಾಯಿತು.

ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೊಂಬತ್ತಿ ಬೆಳಗುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೈ.ಕ.ಪ್ರೇಮ್ ಕುಮಾರ್, ಇಂದಿನ ಯುವಕರು ಚಲನಚಿತ್ರ ನಟರು, ಭ್ರಷ್ಟರಾಜಕಾರಣಿಗಳನ್ನು ಆದರ್ಶಪ್ರಾಯವಾಗಿ ಅನುಸರಿಸುತ್ತಿದ್ದಾರೆ. ಆದರೆ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ದೇಶದ ಸ್ವಾತಂತ್ರ್ಯಕ್ಕೆ ಬಲಿದಾನ ಮಾಡಿದ ಇಂತಹ ಕ್ರಾಂತಕಾರಿ ಪುರುಷರನ್ನು ಅನುಸರಿಸಿ ನಡೆಯಬೇಕು. ಸ್ವಾತಂತ್ರ್ಯ ಚಳವಳಿಗೆ ತೀವ್ರ ಸ್ವರೂಪದ ಹೋರಾಟಗಳನ್ನು ರೂಪಿಸುವಲ್ಲಿ ಯಶಸ್ವಿಯಾದ ಭಗತ್ ಸಿಂಗ್, ರಾಜಗುರು, ಸುಖದೇವ್ ರಂತಹ ಕ್ರಾಂತಿಕಾರಿ ಪುರುಷರ ಪಾತ್ರ ಸ್ಮರಣೀಯ ಎಂದರು.

ಈ ಸಂದರ್ಭದಲ್ಲಿ ಕುಮಾರ್ ಗೌಡ, ರಾಕೇಶ್ ಭಟ್, ಸಂದೇಶ್ ಪವಾರ್, ಟಿ.ಎಸ್.ಅರುಣ್, ರಂಗನಾಥ್, ಜಯಸಿಂಹ, ಪ್ರಮೋದ್ ಗೌಡ, ಗುರುಪ್ರಸಾದ್, ಶ್ರೀನಿವಾಸ್, ಸುರೇಂದ್ರ, ಮಂಜು, ರವಿ ಇತರರು ಉಪಸ್ಥಿತರಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: