ಕರ್ನಾಟಕ

ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜೀವಿಜಯ ಗೆಲ್ಲಲಿದ್ದಾರೆ : ಇಸಾಕ್ ಖಾನ್

ರಾಜ್ಯ(ಮಡಿಕೇರಿ)ಮಾ.24:- ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜೀವಿಜಯ ಗೆಲ್ಲಲಿದ್ದಾರೆ ಎಂದು ಜೆಡಿಎಸ್‍ನ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್ ಹೇಳಿದರು.

ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕ್ಷೇತ್ರದಲ್ಲಿ ಶೇ.75ರಷ್ಟು ಅಲ್ಪಸಂಖ್ಯಾತರು ಹಿರಿಯ ರಾಜಕಾರಣಿ ಬಿ.ಎ. ಜೀವಿಜಯ ಅವರ ಪರವಿದ್ದಾರೆ. ಬಿಜೆಪಿ ಹಾವಳಿಯಿಂದ ಅಲ್ಪಸಂಖ್ಯಾತರು ನೊಂದಿದ್ದಾರೆ. ಕಾಂಗ್ರೆಸ್‍ನಿಂದ ಅಲ್ಪಸಂಖ್ಯಾತರಿಗೆ ಉಪಯೋಗವಿಲ್ಲ ಎಂಬುದು ಅರಿವಾಗಿದೆ. ಜೀವಿಜಯ ಅವರು ಅಲ್ಪಸಂಖ್ಯಾತರ ಮೇಲೆ ಇಟ್ಟಿರುವ ಕಾಳಜಿ ಎಲ್ಲರಿಗೆ ಗೊತ್ತಿದ್ದು, ಜೀವಿಜಯ ಅವರಿಗೆ ಮತ ನೀಡಲಿದ್ದಾರೆ ಎಂದು ಹೇಳಿದರು.

ಪಕ್ಷದ ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಎಚ್.ಆರ್. ಸುರೇಶ್ ಮಾತನಾಡಿ, ಕಳೆದ 20 ವರ್ಷಗಳಿಂದ ಕ್ಷೇತ್ರದ ಶಾಸಕರು ಸುಳ್ಳು ಹೇಳಿಕೊಂಡು ತಿರುಗುವುದನ್ನು ಬಿಟ್ಟರೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಲ್ಲ. ಕಾಮಗಾರಿಯ ಭೂಮಿ ಪೂಜೆಯಲ್ಲೇ ತಮ್ಮ ಅಧಿಕಾರವನ್ನು ಕಳೆದಿದ್ದಾರೆ ಎಂದು ದೂರಿದರು. ಮತದಾರರು ಇಂದು ಪ್ರಜ್ಞಾವಂತರಾಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ನಗರ ಘಟಕದ ಅಧ್ಯಕ್ಷ ಕಮಲ್ ಜಯಾನಂದ್, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವ, ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲಗೌಡ, ಪ್ರಮುಖರಾದ ಸಂಜಯ್ ಜೀವಿಜಯ, ಎ.ಪಿ. ವೀರರಾಜು, ಸಿದ್ದಲಿಂಗಪುರ ರಾಮಣ್ಣ, ಪ್ರವೀಣ್, ವಿಜಯ, ಮತ್ತಿತರರು ಇದ್ದರು. ಇದೇ ಸಂದರ್ಭ ಜೆಡಿಎಸ್ ಪಕ್ಷಕ್ಕೆ ಹಲವರು ಸೇರ್ಪಡೆಗೊಂಡರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: