ಕರ್ನಾಟಕ

ಮಾ.31ರ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ

ಬೆಂಗಳೂರು,ಮಾ.24-ಇದೇ ತಿಂಗಳ 31 ರಂದು ನಡೆಯಲಿರುವ ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯುತ್ಸವಕ್ಕೆ ಶುಕ್ರವಾರ ರಾತ್ರಿ ಚಾಲನೆ ನೀಡಲಾಯಿತು.

ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಬಿದಿರಿನ ಕಂಬದ ಮೇಲೆ ಧ್ವಜ ಹಾರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಮಾ.31 ರಂದು ಕರಗ ಶಕ್ತ್ಯುತ್ಸವ ಜರುಗಲಿದ್ದು, ಮುಜರಾಯಿ ಇಲಾಖೆ ನೇಮಕ ಮಾಡಿರುವ 26 ವರ್ಷದ ಎನ್.ಮನು ಈ ಬಾರಿ ಹೂವಿನ ಕರಗ ಹೊರಲಿದ್ದಾರೆ. ಏಪ್ರಿಲ್ 2ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

31ರಂದು ಕರಗ ಶಕ್ತ್ಯೋತ್ಸವ, ಶ್ರೀ ಧರ್ಮರಾಯ ಸ್ವಾಮಿ ಮಹಾರಥೋತ್ಸವ ಮತ್ತು ಮತ್ಯಾಲಮ್ಮ ದೇವಿಯ ಉತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ, ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. (ಎಂ.ಎನ್)

 

Leave a Reply

comments

Related Articles

error: