ಕರ್ನಾಟಕ

ಸರ್ಕಾರಿ ಆಸ್ಪತ್ರೆಗೆ ನೂತನ ಸ್ಕ್ಯಾನಿಂಗ್ ಮಿಷನ್ ಅಳವಡಿಸಲು ಕ್ರಮ : .ಅಪ್ಪಚ್ಚು ರಂಜನ್

ರಾಜ್ಯ(ಮಡಿಕೇರಿ)ಮಾ.24:- ಸೋಮವಾರಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ನೂತನ ಸ್ಕ್ಯಾನಿಂಗ್ ಮಿಷನ್ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಆಸ್ಪತ್ರೆಗೆ ನೂತನವಾಗಿ ರೆಡಿಯಾಲಜಿಸ್ಟ್ ವೈದ್ಯರ ನೇಮಕವಾಗಿದ್ದು ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಲಿ ಇರುವ ಸ್ಕ್ಯಾನಿಂಗ್ ಯಂತ್ರ ತುಂಬಾ ಹಳೆಯದಾಗಿದ್ದು ಇದರಲ್ಲಿ ಸಮರ್ಪಕ ಫಲಿತಾಂಶ ಹಾಗೂ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ ಎಂಬ ವೈದ್ಯರ ಅಭಿಪ್ರಾಯದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣವೇ ನೂತನ ಸ್ಕ್ಯಾನಿಂಗ್ ಯಂತ್ರ ಅಳವಡಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ರಾಜ್ಯಾದಂತ 38 ರೇಡಿಯಾಜಲಿಸ್ಟ್ ಹುದ್ದೆ ಮಂಜೂರಾಗಿದ್ದು ಇಂದಿಗೂ 35 ಹುದ್ದೆಗಳು ಖಾಲಿ ಉಳಿದಿದೆ. ಸೋಮವಾರಪೇಟೆ ಆಸ್ಪತ್ರೆಗೆ ಇದೇ ಮೊದಲ ಬಾರಿಗೆ ರೇಡಿಯಾಲಜಿಸ್ಟ್  ಡಾ. ಶ್ರೀಧರ್ ಆಗಮಿಸಿದ್ದಾರೆ. ಇದರಿಂದಾಗಿ ಗರ್ಭಿಣಿಯರು, ಕಿಡ್ನಿ, ಹೊಟ್ಟೆಗೆ  ಸಂಬಂದಿಸಿದ ಕಾಯಿಲೆಗಳಿU ಚಿಕಿತ್ಸೆ ಪಡೆಯಬಹುದು ಎಂದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ, ವೈದ್ಯರಾದ ಶರತ್ ಬಾಬು, ಶ್ರೀಧರ್ ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: