ಮೈಸೂರು

ಸಹಾಯಕರಾಗಿದ್ದ ನರಸಿಂಹಮೂರ್ತಿ ಅವರಿಗೆ ಬೀಳ್ಕೊಡುಗೆ

ಮೈಸೂರು,ಮಾ.24:- ಎಸ್.ಬಿ.ಆರ್ ಆರ್ ಮಹಾಜನ ಪ್ರಥಮದರ್ಝೆ ಕಾಲೇಜಿನ  ಭೌತಶಾಸ್ತ್ರ ವಿಭಾಗದಲ್ಲಿ ಸಹಾಯಕರಾಗಿದ್ದ ನರಸಿಂಹಮೂರ್ತಿಯವರು 28 ವರ್ಷಗಳ ದೀರ್ಘ ಸೇವೆಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಮಹಾಜನ ವಿದ್ಯಾಸಂಸ್ಥೆ ಹಾಗೂ ಕಾಲೇಜಿನ ಪರವಾಗಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಆರ್. ವಾಸುದೇವಮೂರ್ತಿ, ಗೌರವ ಕಾರ್ಯದರ್ಶಿಗಳಾದ ಡಾ. ವಿಜಯಲಕ್ಷ್ಮೀ ಮುರಳೀಧರ, ಕಾಲೇಜಿನ ಸಿಇಓ ಡಾ. ರಮೇಶ್ ಎಸ್.ಆರ್. ಹಾಗೂ ಪ್ರಾಂಶುಪಾಲರಾದ ಡಾ. ಎಸ್. ವೆಂಕಟರಾಮು ಹಾಗೂ ಕಛೇರಿಯ ಇತರ ಸದಸ್ಯರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: