ಮೈಸೂರು

ಆಧುನಿಕ ಯಾಂತ್ರಿಕ ಕಸಾಯಿಖಾನೆ ಸ್ಥಳಾಂತರ : ಸಂಭ್ರಮಾಚರಣೆ .25.

ಮೈಸೂರು,ಮಾ.24 : ಉದ್ದೇಶಿತ ಆಧುನಿಕ ಯಾಂತ್ರಿಕ ಕಸಾಯಿಖಾನೆ ನಿರ್ಮಾಣವನ್ನು ಜನವಸತಿ ಪ್ರದೇಶದಿಂದ ಸ್ಥಳಾಂತರಗೊಳಿಸಿದ ಮಹಾನಗರ ಪಾಲಿಕೆಯೂ ಕ್ರಮವನ್ನು ಆಧುನಿಕ ಯಾಂತ್ರಿಕ ಕಸಾಯಿಖಾನೆ ನಿರ್ಮಾಣ ವಿರೋಧಿ ಸಂಘಟನೆಗಳ ಒಕ್ಕೂಟವು ಸ್ವಾಗತಿಸಿದೆ.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪರವಾಗಿ ಮಾಜಿ ಶಾಸಕ ಇ.ಮಾರುತಿ ರಾವ್ ಪವಾರ್ ಮಾತನಾಡಿ. ನಗರದ ಕೆಸರೆ, ಕೆ.ಹೆಚ್.ಬಿ.ಕಾಲೋನಿ, ಆರ್.ಎಸ್.ನಾಯ್ಡು ನಗರದ ವ್ಯಾಪ್ತಿಯಲ್ಲಿ ಆಧುನಿಕ ಯಾಂತ್ರಿಕ ಕಸಾಯಿಖಾನೆ ನಿರ್ಮಾಣಕ್ಕೆ ಮುಂದಾಗಿದ್ದ ಪಾಲಿಕೆಯ ನಿರ್ಧಾರವನ್ನು ಖಂಡಿಸಿ ಸ್ಥಳೀಯ ನಿವಾಸಿಗಳೊಂದಿಗೆ ಸುಮಾರು 186 ದಿನಗಳ ಕಾಲ ಹೋರಾಟ, ರಸ್ತೆ ತಡೆ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೆ ಅಧಿಕಾರಿಗಳು ಮೊಂಡುತನ ಪ್ರದರ್ಶಿಸಿದ್ದರು. ಇದರಿಂದ ನೇರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು. ಇದಕ್ಕೆ ಕೇಂದ್ರ ಸ್ಪಂದಿಸಿ ಸ್ಥಳಾಂತರಕ್ಕೆ ನಿರ್ದೇಶನ ನೀಡಿದೆ ಎಂದು ಹೇಳಿದರು.

ಈ ಹಿನ್ನಲೆಯಲ್ಲಿ  ಪ್ರತಿಭಟನೆ ನಡೆಸಿದ ಆರ್.ಎಸ್.ನಾಯ್ಡು ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಗಣಪತಿ ದೇವಸ್ಥಾನದ ಆವರಣದಲ್ಲಿ  ಮಾ.25ರ ಸಂಜೆ 5.30ಕ್ಕೆ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದ್ದು, ಅಂದು ಹೋರಾಟಗಾರರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಸ್ಥಳೀಯರಿಗೆ ಆಗುವ ತೊಂದರೆಯನ್ನು ಮನಗಂಡು ಉದ್ದೇಶಿತ ಆಧುನಿಕ ಯಾಂತ್ರಿಕ ಕಸಾಯಿಖಾನೆಯನ್ನು ನಗರದ ಹೊರವಲಯದಲ್ಲಿ ಸ್ಥಳಾಂತರಗೊಳಿಸಿದ್ದು 15 ಎಕರೆ ಜಾಗದಲ್ಲಿ ಸುಮಾರು 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಈಗಾಗಲೇ 1.5 ಕೋಟಿ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ತಿಳಿಸಿದರು.

ಒಕ್ಕೂಟದ ಡಾ.ಎಸ್.ಕೆ.ಮಿತ್ತಲ್, ಪ್ರೊ.ಎಸ್.ಶಿವಾಜಿ ಜೋಯಿಸ್, ವಕೀಲ ಡಿ. ಮಹೇಶ್ ಪ್ರಸಾದ್, ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: