ಮೈಸೂರು

ಪಾಲಿಕೆಯಲ್ಲಿ 9 ಮಹಿಳಾ ಗುಮಾಸ್ತೆಯರ ನೇಮಕ: ಬಿ.ಎಲ್. ಭೈರಪ್ಪ

ಮೈಸೂರು ಮಹಾನಗರಪಾಲಿಕೆಯಲ್ಲಿ ಒಂಭತ್ತು ಮಂದಿ ಮಹಿಳಾ ಗುಮಾಸ್ತರುಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆಯ ಮೇಯರ್ ಬಿ.ಎಲ್. ಭೈರಪ್ಪ ತಿಳಿಸಿದರು.

ಸೋಮವಾರ, ಮೈಸೂರು ಪಾಲಿಕೆ ಕಚೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮೇಯರ್ ಬಿ.ಎಲ್. ಭೈರಪ್ಪ ಮಾತನಾಡಿ ಇಂದಿನಿಂದಲೇ ಡಿಇಓಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನಮಗೆ ಜವಾಬ್ದಾರಿಯುತವಾಗಿ ಕೆಲಸ ಮಾಡುವವರು ಬೇಕು. ಏಜೆಂಟ್ ಗಳಿಂದ ಹಣ ಪಡೆದು ಕೆಲಸ ಮಾಡುವವರು ಬೇಡ ಅದಕ್ಕಾಗಿಯೇ ಈ ನೇಮಕಾತಿ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ನಗರದಲ್ಲಿ ಎಲ್ಲೆಂದರಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿರುವವರ ವಿರುಧ್ಧ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ. ಆ್ಯಕ್ಟ್ 1981 ರ ಕಾಯ್ದೆ ಕಲಂ 3ರ ಪ್ರಕಾರ ಪ್ರಕರಣ ದಾಖಲಿಸಬಹುದಾಗಿದ್ದು, 6 ತಿಂಗಳು ಜೈಲು ಶಿಕ್ಷೆ ಅಥವಾ 1000 ರೂ. ದಂಡ ವಿಧಿಸಲು ಅವಕಾಶವಿದ್ದು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಯಾವುದೇ ಸ್ಥಳಗಳಲ್ಲಿ ಬ್ಯಾನರ್, ಫ್ಲೆಕ್ಸ್  ಅಳವಡಿಸುವುದನ್ನು ಕಂಡರೆ ಕಾನೂನು ಕ್ರಮ ಜರುಗಿಸಲು ಪಾಲಿಕೆ ಅಧಿಕಾರಿಗಳ ಕಾರ್ಯಪಡೆ ರಚಿಸಲಾಗಿದೆ ಎಂದರು.

ಇಷ್ಟು ದಿನ ಯಾವುದೇ ಕಂದಾಯ ಕಟ್ಟಲು ಕೊಟಕ್ ಮಹೀಂದ್ರಾ ಬ್ಯಾಂಕ್ ಗೆ ಟೆಂಡರ್ ನೀಡಲಾಗಿತ್ತು. ಆದರೆ ಇದೀಗ ಟೆಂಡರ್ ಅನ್ನು ಐಡಿಬಿಐ ಬ್ಯಾಂಕ್ ಗೆ ನೀಡಲಾಗಿದ್ದು, ಅದರಲ್ಲಿ ಹಣ ಪಾವತಿಸುವ ಎಲ್ಲ ರೀತಿಯ ಸೌಲಭ್ಯಗಳಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.

ನಗರದಾದ್ಯಂತ ಎಲ್.ಇ.ಡಿ ಬಲ್ಬ್ ಅಳವಡಿಸುವ ಕುರಿತು ಚಿಂತನೆ ನಡೆಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಮುಂದಿನ ಜನವರಿಯೊಳಗೆ ಸರ್ಕಾರ ಒಪ್ಪಿಗೆ ನೀಡುವ ಭರವಸೆ ಇದೆ ಎಂದರು. 76 ಸಾವಿರ ಬಲ್ಬ್ ಗಳಿದ್ದು, 21 ಕೋಟಿ ನಿರ್ವಹಣಾ ವೆಚ್ಚವಾಗುತ್ತಿದೆ. ಎಲ್ ಇ ಡಿ ಬಲ್ಬ್ ಅಳವಡಿಸುವುದರಿಂದ ಶೇ.50 ರಷ್ಟು ಹಣ ಉಳಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಆಯುಕ್ತ ಜೆ. ಜಗದೀಶ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಗರದಾದ್ಯಂತ ಎಲ್ಲೆಂದರಲ್ಲಿ ಜಾಹೀರಾತು ಫಲಕಗಳು ರಾರಾಜಿಸುತ್ತಿದ್ದವು. ಈ ಕುರಿತು ವಾರಗಳೀಚೆ ಸಿಟಿಟುಡೆ ವರದಿ ಮಾಡಿತ್ತು. ಸಿಟಿಟುಡೆಯ ಫಲಶ್ರುತಿಯಂತೆ ಮೇಯರ್ ಭೈರಪ್ಪ ಜಾಹೀರಾತು ಫಲಕ ಅಳವಡಿಸಿ ನಗರ ಸೌಂದರ್ಯ ಹಾಳು ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

Leave a Reply

comments

Related Articles

error: