ಮೈಸೂರು

ಪರಿವಾರ -ತಳವಾರ ಪರಿಶಿಷ್ಟ ಪಂಗಡಕ್ಕೆ : ಅಭಿನಂದನೆ

ಮೈಸೂರು, ಮಾ.24 : ಕೇಂದ್ರ ಸರ್ಕಾರ ಪರಿವಾರ, ತಳವಾರ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೊದಲಾದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮೈಸೂರು ಜಿಲ್ಲಾ ನಾಯಕರ ಯುವ ವೇದಿಕೆ ತಿಳಿಸಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮಧುವನ ಚಂದ್ರು, ನಾಯಕ ಸಮುದಾಯದ ಮುಖಂಡ ದಿ. ಚಿಕ್ಕಮಾದು ಹಾಗೂ ಇನ್ನಿತರರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಎಂ. ಕುಮಾರ್, ಎಸ್. ಮಹದೇವ ಇದ್ದರು. (ವರದಿ :ಕೆ.ಎಂ.ಆರ್)

Leave a Reply

comments

Related Articles

error: