ಸುದ್ದಿ ಸಂಕ್ಷಿಪ್ತ
ವಿಶ್ವರಂಗ ದಿನ : ‘ಈ ಕೆಳಗಿನವರು’ ನಾಟಕ ಪ್ರದರ್ಶನ
ಮೈಸೂರು,ಮಾ.24 : ನಟನ ರಂಗಶಾಲೆಯಿಂದ ವಿಶ್ವ ರಂಗ ದಿನದಂದು ‘ಈ ಕೆಳಗಿನವರು’ ನಾಟಕವನ್ನು ಮಾ.27,28ರ ಸಂಜೆ 6ಕ್ಕೆ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಪ್ರದರ್ಶನಗೊಳಿಸಲಾಗುವುದು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಟ ರಮೇಶ್ ಅರವಿಂದ್, ಮುಡಾ ಕಾರ್ಯದರ್ಶಿ ಎಂ.ಕೆ.ಸವಿತಾ, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ರಂಗಕರ್ಮಿ ಎನ್.ಧನಂಜಯ ಇನ್ನಿತರರು ಪಾಲ್ಗೊಳ್ಳುವರು. ಮಾ.28ರಂದು ನಾಟಕದ ಮರು ಪ್ರದರ್ಶನವಿದೆ. (ಕೆ.ಎಂ.ಆರ್)