ಸುದ್ದಿ ಸಂಕ್ಷಿಪ್ತ

ಆರು ಮಂದಿ ಅರ್ಚಕರಿಗೆ ಶ್ರೀ ರಾಮ ಸೇವಾ ಪ್ರಶಸ್ತಿ

ಮೈಸೂರು,ಮಾ.24-ಶ್ರೀ ರಾಮನವಮಿ ಅಂಗವಾಗಿ ಶ್ರೀರಾಮ ಯುವಕ ಮಂಡಳಿ ವತಿಯಿಂದ ಆರು ಮಂದಿ ಅರ್ಚಕರಿಗೆ ಶ್ರೀ ರಾಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮಾ.25 ರಂದು ಬೆಳಿಗ್ಗೆ 11 ಗಂಟೆಗೆ ಅಗ್ರಹಾರ ವೃತ್ತದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅರ್ಚಕರಾದ ಶ್ರೀನಾಥ್, ಶ್ರೀಕಾಂತ್ ಕಶ್ಯಪ್, ಸುಮಂತ್ ಶಾಸ್ತ್ರೀ, ಟಿ.ಎಸ್.ಅರುಣ್, ಸುಬ್ರಹ್ಮಣ್ಯ ಶರ್ಮ, ನಿರಂಜನ್ ಶರ್ಮ ಅವರಿಗೆ ಪ್ರಶಸ್ತಿ ಪ್ರದನಾ ಮಾಡಲಾಗುವುದು.

ಸಮಾರಂಭದಲ್ಲಿ ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮೈಸೂರು ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ಚಲನಚಿತ್ರ ನಟಿ ಹಾಗೂ ಬಿಜೆಪಿ ವಕ್ತಾರರಾದ ಮಾಳವಿಕ ಅವಿನಾಶ್ ಇತರರು ಭಾಗವಹಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: