ಕರ್ನಾಟಕ

ಬೇಲೂರು ಶಾಸಕ ರುದ್ರೇಶ್‌ಗೌಡ ನಿಧನ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸಂತಾಪ

ಬೆಂಗಳೂರು(ಮಾ.24): ಹೃದಯಾಘಾತವಾಗಿ ಇಂದು ನಿಧನ ಹೊಂದಿದ ಬೇಲೂರು ಶಾಸಕರಾದ ವೈ.ಎನ್. ರುದ್ರೇಶ್ ಗೌಡ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರುದ್ರೇಶ್ ಗೌಡ ರಾಜಕೀಯದಲ್ಲಿ ಅಜಾತ ಶತ್ರು, ಸಜ್ಜನ ರಾಜಕಾರಣಿಯಾಗಿದ್ದ ವೈಎನ್ ರುದ್ರೇಶ್ ಗೌಡರ ನಿಧನದಿಂದ ಜಿಲ್ಲೆಯ ಒಬ್ಬ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಿದೆ. ಅವರು ನಿಧನರಾದ ಸುದ್ಇ ತಿಳಿದು ಮನಸ್ಸಿಗೆ ನೋವಾಗಿದೆ ಎಂದು ದೇವೇಗೌಡರು ಕಂಬನಿ ಮಿಡಿದಿದ್ದಾರೆ.

ಇದೇ ವೇಳೆ ದೇವೇಗೌಡ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ, ಲೋಕಸಭಾ ಸದಸ್ಯರಾಗಿ, ಶಾಸಕರಾಗಿ ಜಿಲ್ಲೆಯಲ್ಲಿ ಉತ್ತಮ ವಾಗ್ಮಿಯಾಗಿದ್ದರು. ಅವರ ಆತ್ಮಕ್ಕೆ ಚಿರ ಶಾಂತಿ ಕರುಣಿಸಲಿ ಎಂದು ಕೋರುತ್ತೇನೆ. ಹಾಗೂ ಅವರ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ದೇವರು ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.(ಎನ್.ಬಿ)

Leave a Reply

comments

Related Articles

error: