ಕರ್ನಾಟಕ

ವಿದ್ಯಾವಂತ ಮಹಿಳೆ ಮಹಿಳಾ ಶೋಷಣೆಯ ವಿರುದ್ಧ ಹೋರಾಟಕ್ಕೆ ನಿಲ್ಲಬಲ್ಲಳು : ಶಾರದ ರಾಮನ್

ರಾಜ್ಯ(ಮಡಿಕೇರಿ)ಮಾ.24:-  ವಿದ್ಯಾವಂತ ಮಹಿಳೆ ಮಹಿಳಾ ಶೋಷಣೆಯ ವಿರುದ್ಧ ಹೋರಾಟಕ್ಕೆ ನಿಲ್ಲಬಲ್ಲಳು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿವೃತ್ತ ಅಧಿಕಾರಿ ಶಾರದ ರಾಮನ್ ಅಭಿಪ್ರಾಯಿಸಿದರು.

ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆ ಶೈಕ್ಷಣಿಕವಾಗಿ ಸಾಧನೆ ಮಾಡಲೇ ಬೇಕಾದ ಅನಿವಾರ್ಯತೆಯಿದೆ. ವಿದ್ಯಾವಂತ ಮಹಿಳೆ ಕುಟುಂಬ ಹಾಗು ಮಕ್ಕಳ ಸಂಪತ್ತು ಎಂದರು.  ಮಹಿಳೆಯರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾಭ್ಯಾಸ ಪೂರ್ಣಗೊಳ್ಳುವ ಮೊದಲು ನಗರ ಪ್ರದೇಶಗಳಲ್ಲಿ ನೌಕರಿಗೆ ಕಳುಹಿಸುವಾಗ ಎಚ್ಚರ ವಹಿಸಬೇಕು. ಭದ್ರತೆಯಿಲ್ಲದ ನೌಕರಿಯಿಂದ ಹೆಣ್ಣುಮಕ್ಕಳು ಶೋಷಣೆಗೆ ತುತ್ತಾಗುವ ಸಂಭವ ಜಾಸ್ತಿಯಿದೆ. ಇಂತಹ ಅನೇಕ ಘಟನೆಗಳನ್ನು ತಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭ ದೂರುಗಳನ್ನು ಸ್ವೀಕರಿಸಿದ್ದೇನೆ. ಸಂತ್ರಸ್ಥರಿಗೆ ನ್ಯಾಯ ಕೊಡಿಸುವಲ್ಲೂ ಹೋರಾಟ ಮಾಡಿದ್ದೇನೆ ಎಂದು ತನ್ನ ಅನುಭವ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಮಾಜಸೇವಕಿ ರಾಣಿ ರಾಮಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸಂಘದ ಅಧ್ಯಕ್ಷೆ ನಳಿನಿ ಗಣೇಶ್, ಉಪಾಧ್ಯಕ್ಷೆ ಶೋಭ ಶಿವರಾಜ್, ಪದಾಧಿಕಾರಿಗಳಾದ ಜಲಜಶೇಖರ್, ಸುಮಾ ಸುದೀಪ್, ಗಾಯಿತ್ರಿ ನಾಗರಾಜ್, ಉಷಾ ತೇಜಸ್ವಿ, ಲೀಲಾ ನಿರ್ವಾಣಿ, ಶೋಭ ಯಶ್ವಂತ್, ಜ್ಯೋತಿ ಶುಭಾಕರ್, ಲತ ಮಂಜು ಇದ್ದರು. ದಿನದ ಅಂಗವಾಗಿ ಸಂಘದ ಸದಸ್ಯರುಗೆ ವಿವಿಧ ಕ್ರೀಡಾಸ್ಪರ್ಧೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: