ಮೈಸೂರು

ಕವಿಗೋಷ್ಠಿಗಳು ಆಧುನೀಕರಣಗೊಳ್ಳಬೇಕು: ಪ್ರೊ. ಅರವಿಂದ ಮಾಲಗತ್ತಿ

ಪ್ರಸ್ತುತ ಕವಿಗೋಷ್ಠಿಗಳು ಪ್ರಾದೇಶಿಕವಾಗುತ್ತಿವೆ. ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಕವಿಗೋಷ್ಠಿಗಳನ್ನು ಮಾಡಿ ಅವುಗಳನ್ನು ಉನ್ನತೀಕರಣಗೊಳಿಸಬೇಕು ಎಂದು ಚಿಂತಕ ಪ್ರೊ. ಅರವಿಂದ ಮಾಲಗತ್ತಿ ಹೇಳಿದರು.

ಗಾಂಧಿ ಅಧ್ಯಯನ ಕೇಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪ್ರಮತಿ ಶಿಕ್ಷಣ ಸಂಸ್ಥೆಗಳು – ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಮೈಸೂರಿನ ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಗಾಂಧಿ- ಬಹುಭಾಷಾ ಕವಿಗೋಷ್ಠಿ’ ಕಾರ್ಯಕ್ರಮವನ್ನು ಅರವಿಂದ ಮಾಲಗತ್ತಿ ಅವರು ಗಿಡಕ್ಕೆ ನೀರುಣಿಸುವ ಮೂಲಕ ಉದ‍್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಸ್ಕೃತಿ ಇರುವ ನಾಡು ಸುಭಿಕ್ಷವಾಗಿರುತ್ತದೆ. ಅಂತೆಯೇ ಮೈಸೂರು ಕೂಡ ಸುಭಿಕ್ಷವಾಗಿದೆ. ಮೈಸೂರಿನಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ದಸರಾ ಕವಿಗೋಷ್ಠಿ ಅತಿಮುಖ್ಯವಾಗಿದೆ. ಆದರೆ ಅಲ್ಲಿ ಬಹುಭಾಷೆಯ ಪರಿಕಲ್ಪನೆ ಕಾಣುತ್ತಿಲ್ಲ. ಆದ್ದರಿಂದ ದಸರಾ ಕವಿಗೋಷ್ಠಿಯು ಕಾಲಕಾಲಕ್ಕೆ ಆಧುನೀಕರಣಗೊಳ್ಳಬೇಕು. ಪ್ರತ್ಯೇಕವಾಗಿ ಬಹುಭಾಷಾ ಕವಿಗೋಷ್ಠಿ ನಡೆಸಬೇಕು ಎಂದು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಸಾಹಿತಿ ಪ್ರೊ. ಸಿ.ಪಿ. ಕೃಷ್ಣಕುಮಾರ್, ಕಾವ್ಯವೇ ನಿಜವಾದ ಮಾತೃಭಾಷೆ. ಕಾವ್ಯದ ಮೂಲಕ ನಮ್ಮ ಹೃದಯವನ್ನು ಅಭಿವ್ಯಕ್ತಿಸಬಹುದಾಗಿದೆ.

Leave a Reply

comments

Related Articles

error: