ಮೈಸೂರು

ಎಟಿಎಂಇ ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಛ ಭಾರತ ಅಭಿಯಾನ

ನಗರದ ಎಟಿಎಂಇ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಇತ್ತೀಚಿಗೆ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದರು.

ಕಾಲೇಜಿನ 7ನೇ ಸೆಮಿಸ್ಟರ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಿದ್ಯಾರ್ಥಿಗಳು ವರುಣಾ ಹೋಬಳಿಯ ಮೆಲ್ಲಹಳ್ಳಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಶ್ರೀಮಹದೇಶ್ವರ ವಿದ್ಯಾಸಂಸ್ಥೆಯಿಂದ ಸರ್ಕಾರಿ ಶಾಲೆಯವರೆಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ನಂತರ ಸಾರ್ವಜನಿಕರೊಂದಿಗೆ ಮಾತನಾಡಿ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಸ್ವಚ್ಛತೆ ಇಲ್ಲವಾದಲ್ಲಿ ಸೊಳ್ಳೆಗಳು ಹೆಚ್ಚಾಗಿ ಡೆಂಘೀ, ಮಲೇರಿಯಾ, ಭಯಾನಕ ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ತಿಳಿಸಿ ನಿರುಪಯುಕ್ತ ವಸ್ತುಗಳಲ್ಲಿ ನೀರು ಶೇಖರಣೆ ತಪ್ಪಿಸಿ ಸೊಳ್ಳೆಯನ್ನು ನಿಯಂತ್ರಿಸಿ ಎಂದು ಕರೆ ನೀಡಿದರು.

ವಿಭಾಗದ ಮುಖಸ್ಥ ಪಾರ್ಥಸಾರಥಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಮಂಚಮ್ಮ ಮಾತನಾಡಿದರು. ಸದಸ್ಯರಾದ ಪ್ರಸಾದ್ ಎಂ, ಲೇಖಮ್ಮ, ಗ್ರಾಮದ ಮುಖಂಡರು ಹಾಗೂ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ ವಿಭಾಗದ ಉಪನ್ಯಾಸಕರು ಹಾಗೂ ಮುಖಸ್ಥರು ಭಾಗವಹಿಸಿದ್ದರು.

Leave a Reply

comments

Related Articles

error: