ಕರ್ನಾಟಕ

ಪಾರ್ಲರ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಬ್ಯೂಟಿಷಿಯನ್ ಬಂಧನ

ಬೆಂಗಳೂರು,ಮಾ.27: ಸೌದಿ ಅರೇಬಿಯಾ ವಿದ್ಯಾರ್ಥಿನಿಯ ಮೇಲೆ ಪಾರ್ಲರ್ ನಲ್ಲಿ ಬ್ಯೂಟಿಷಿಯನ್ ಲೈಂಗಿಕ ದೌರ್ಜನ್ಯವೆಸಗಿರೋ ಘಟನೆ ಇಂದು ಬೆಳಕಿಗೆ ಬಂದಿದೆ.

ಜಾವಿದ್ ಹಬೀಬ್ ಬ್ಯೂಟಿ ಪಾರ್ಲರ್ ಬ್ಯೂಟಿಷಿಯನ್ ಲಕ್ಕಿಸಿಂಗ್  ಆರೋಪಿ.  ಎಂಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾನೆ. ಕಾಲೇಜ್ ಫೆಸ್ಟ್ ಇದ್ದ ಕಾರಣ ಸೌದಿ ಮೂಲದ ವಿದ್ಯಾರ್ಥಿನಿ ಬ್ಯೂಟಿ ಪಾರ್ಲರ್ ಗೆ ತೆರಳಿದ್ದಳು. ಈ ವೇಳೆ ಅಲ್ಲಿನ ಬ್ಯೂಟಿಷಿಯನ್ ಲಕ್ಕಿಸಿಂಗ್ ವಿದ್ಯಾರ್ಥಿನಿ ಮೇಲೆ ತನ್ನ ವಿಕೃತಿ ಮೆರೆದಿದ್ದಾನೆ. ಘಟನೆಯ ಬಳಿಕ ವಿದ್ಯಾರ್ಥಿನಿ ತನ್ನ ಗೆಳತಿಯರ ಜೊತೆ ಈ ವಿಚಾರವನ್ನು ಹಂಚಿಕೊಂಡಿದ್ದಾಳೆ. ನಂತರ ಸ್ನೇಹಿತೆಯರ ಸಹಾಯದಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿದ ಎರಡೇ ಗಂಟೆಯಲ್ಲಿ ಪೊಲೀಸರು ಆರೋಪಿ ಬ್ಯೂಟಿಷಿಯನ್ ನನ್ನು ಬಂಧಿಸಿದ್ದಾರೆ. (ವರದಿ: ಪಿ.ಎಸ್ )

Leave a Reply

comments

Related Articles

error: