ಮೈಸೂರು

ಲಲಿತಾದ್ರಿನಗರ ಬಡಾವಣೆಯಲ್ಲಿ ನಿವೇಶನ ಮಂಜೂರಾಗಿರುವವರಿಗೆ 530 ಮಧ್ಯಂತರ ನಿವೇಶನಗಳ ಮಂಜೂರಾತಿ ಪತ್ರ ವಿತರಣೆ

ಮೈಸೂರು,ಮಾ.26-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲಲಿತಾದ್ರಿನಗರ (ಉತ್ತರ) ಬಡಾವಣೆಯಲ್ಲಿ ನಿವೇಶನ ಮಂಜೂರಾಗಿರುವವರಿಗೆ ಮುಡಾ ಆವರಣದಲ್ಲಿ ಸೋಮವಾರ ಸಚಿವ ಡಾ.ಎಚ್.ಸಿ.ಮಹದೇವಪ್ಪ 530 ಮಧ್ಯಂತರ ನಿವೇಶನಗಳ ಮಂಜೂರಾತಿ ಪತ್ರ ವಿತರಿಸಿದರು.

ಲಲಿತಾದ್ರಿನಗರ (ಉತ್ತರ) ಬಡಾವಣೆಯಲ್ಲಿ 820 ನಿವೇಶನಗಳನ್ನು ರಚಿಸಿದ್ದು, ವಿವಿಧ ಅಳತೆ 125+, ಮೂಲೆ ನಿವೇಶನ 165 ಗಳನ್ನು ಹೊರತುಪಡಿಸಿ ಉಳಿಕೆ 530 ನಿವೇಶನಗಳನ್ನು ಹಂಚಿಕೆ ಮಾಡಲಾಯಿತು.

ಬಡಾವಣೆಯಲ್ಲಿ ಹಂಚಿಕೆ ಮಾಡಿದ ಮಧ್ಯಂತರ ನಿವೇಶನಗಳ ವಿವರ:

6×9 ಅಳತೆಯ ನಿವೇಶನದಲ್ಲಿ 125 ಮಂದಿಗೆ, 9X12 ಅಳತೆಯ ನಿವೇಶನದಲ್ಲಿ 300 ಮಂದಿಗೆ, 12X18 ಅಳತೆಯ ನಿವೇಶನದಲ್ಲಿ 70 ಮಂದಿಗೆ, 15X24 ಅಳತೆಯ ನಿವೇಶನದಲ್ಲಿ 35 ಮಂದಿಗೆ ನಿವೇಶನ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಇತರೆ ಹಿಂದುಳಿದ ವರ್ಗಗಳಿಗೆ 6×9 ನಿವೇಶನದಲ್ಲಿ 3, 9X12 ನಿವೇಶನದಲ್ಲಿ 6, 12×18 ನಿವೇಶನದಲ್ಲಿ 1, 15×24 ನಿವೇಶನದಲ್ಲಿ 1 ಒಟ್ಟು 11, ಅನುಸೂಚಿತ ಬುಡಕಟ್ಟುಗಳಿಗೆ 6×9 ನಿವೇಶನದಲ್ಲಿ 8, 9X12 ನಿವೇಶನದಲ್ಲಿ 20, 12×18 ನಿವೇಶನದಲ್ಲಿ 5, 15×24 ನಿವೇಶನದಲ್ಲಿ 2 ಒಟ್ಟು 35, ಅನುಸೂಚಿತ ಜಾತಿಗಳಿಗೆ 6×9 ನಿವೇಶನದಲ್ಲಿ 20, 9X12 ನಿವೇಶನದಲ್ಲಿ 49, 12×18 ನಿವೇಶನದಲ್ಲಿ 11, 15×24 ನಿವೇಶನದಲ್ಲಿ 6 ಒಟ್ಟು 86, ಮಾಜಿ ಸೈನಿಕರಿಗೆ 6×9 ನಿವೇಶನದಲ್ಲಿ 10, 9X12 ನಿವೇಶನದಲ್ಲಿ 23, 12×18 ನಿವೇಶನದಲ್ಲಿ 6, 15×24 ನಿವೇಶನದಲ್ಲಿ 3 ಒಟ್ಟು 42, ರಾಜ್ಯ ಸರ್ಕಾರಿ ನೌಕರರಿಗೆ 6×9 ನಿವೇಶನದಲ್ಲಿ 9, 9X12 ನಿವೇಶನದಲ್ಲಿ 23, 12×18 ನಿವೇಶನದಲ್ಲಿ 5, 15×24 ನಿವೇಶನದಲ್ಲಿ 3 ಒಟ್ಟು 40, ಕೇಂದ್ರ ಸರ್ಕಾರಿ ನೌಕರರಿಗೆ 6×9 ನಿವೇಶನದಲ್ಲಿ 6, 9X12 ನಿವೇಶನದಲ್ಲಿ 15, 12×18 ನಿವೇಶನದಲ್ಲಿ 4, 15×24 ನಿವೇಶನದಲ್ಲಿ 2 ಒಟ್ಟು 27, ಸಾರ್ವಜನಿಕರು 6×9 ನಿವೇಶನದಲ್ಲಿ 63, 9X12 ನಿವೇಶನದಲ್ಲಿ 150, 12×18 ನಿವೇಶನದಲ್ಲಿ 35, 15×24 ನಿವೇಶನದಲ್ಲಿ 16 ಒಟ್ಟು 264, ಹೆಚ್ ಪ್ರವರ್ಗದಲ್ಲಿ 6×9 ನಿವೇಶನದಲ್ಲಿ 3, 9X12 ನಿವೇಶನದಲ್ಲಿ 8, 12×18 ನಿವೇಶನದಲ್ಲಿ 2, 15×24 ನಿವೇಶನದಲ್ಲಿ 1 ಒಟ್ಟು 14, ವಿಶೇಷಚೇತನರಿಗೆ 6×9 ನಿವೇಶನದಲ್ಲಿ 3, 9X12 ನಿವೇಶನದಲ್ಲಿ 6, 12×18 ನಿವೇಶನದಲ್ಲಿ 1, 15×24 ನಿವೇಶನದಲ್ಲಿ 1 ಒಟ್ಟು 11 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.

ಲಲಿತಾದ್ರಿನಗರ (ಉತ್ತರ) ಬಡಾವಣೆ ನಿರ್ಮಿಸಿರುವ ಒಟ್ಟು ವಿಸ್ತೀರ್ಣ 145 ಎಕರೆಯಾಗಿದ್ದು, ಇಂದು ಹಂಚಿಕೆ ಮಾಡಿದ ನಿವೇಶನಗಳು 530 ಆಗಿದೆ. ಒಟ್ಟು 31,251 ಅರ್ಜಿಗಳು ಬಂದಿದ್ದು, 2018ರ ಜ.6 ರಂದು ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲಾಗಿತ್ತು. ಫೆ.1 ರಂದು ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲಾಗಿತ್ತು.

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ಆಯುಕ್ತ ಕಾಂತರಾಜು ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: