ಮೈಸೂರು

ಅರಿವು ಸಂಸ್ಥೆಯಿಂದ ಸಂಭ್ರಮಾಚರಣೆ

ದೇಶಾದ್ಯಂತ ಪ್ರಧಾನಿ ಮೋದಿಯವರು 500 ಹಾಗೂ 1000 ರೂ. ಮುಖಬೆಲೆಯ ನೋಟನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳು ಆಕ್ರೋಶ್ ದಿನವನ್ನಾಚರಿಸಿದರೆ ಮೈಸೂರಿನ ಅರಿವು ಸಂಸ್ಥೆಯ ವತಿಯಿಂದ ಸಂಭ್ರಮದ ದಿನವನ್ನಾಚರಿಸಲಾಯಿತು.

ಜನಸಾಮಾನ್ಯರಿಗೆ, ರಸ್ತೆ ಬದಿ ವ್ಯಾಪಾರಸ್ಥರಿಗೆ, ಆಟೋ ಚಾಲಕರಿಗೆ, ಅಂಗಡಿ ಮಾಲಿಕರಿಗೆ ಹೂವಿನ ಹಾರ ಹಾಕಿ, ಮೈಸೂರು ಪಾಕ್ ತಿನ್ನಿಸುವ ಮೂಲಕ ಸಂಭ್ರಮವನ್ನಾಚರಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ಪಾಲಿಕೆ ಸದಸ್ಯ ಮಾವಿ ರಾಮಪ್ರಸಾದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದನ್ನು ಜನಸಾಮಾನ್ಯರು ಬೆಂಬಲಿಸಿ, ಮುಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಳಧನಿಕರು ಮಾತ್ರ ಆಕ್ರೋಶ ದಿನವನ್ನಾಚರಿಸುತ್ತಿದ್ದಾರೆ ಎಂದರು.

ಈ ಸಂದರ್ಭ ಜೋಗಿ ಮಂಜು, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಶ್ರೀಕಾಂತ್ ಕಶ್ಯಪ್, ರವಿತೇಜ, ಸಂದೀಪ್, ಕೃಷ್ಣ, ಮಹೇಶ್, ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: