ಮೈಸೂರು

ಮತಗಳನ್ನು ಮಾರಿಕೊಳ್ಳಬೇಡಿ : ಹುಚ್ಚ ವೆಂಕಟ್ ಜಾಗೃತಿ

ಮೈಸೂರು,ಮಾ.26 :  ಉಡುಗೊರೆ, ನಗದು ಅಮಿಷವೊಡ್ಡಿ ದಾರಿ ತಪ್ಪಿಸುವ ಜನಪ್ರತಿನಿಧಿಗಳಿಂದ ಪ್ರಜ್ಞಾವಂತ ಮತದಾರರು ಅಂತರ ಕಾಯ್ದುಕೊಳ್ಳಿ, ಮತಗಳು ಅಮೂಲ್ಯವಾಗಿದ್ದು ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕೆಂದು ಮತದಾರರಲ್ಲಿ ಚಿತ್ರನಟ, ನಿರ್ದೇಶಕ ಹುಚ್ಚ ವೆಂಕಟ್ ಮನವಿ ಮಾಡಿದರು.
ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬೆಂಗಳೂರಿನ ರಾಜರಾಜೇಶ್ವರಿ ನಗರದ ಅಭ್ಯರ್ಥಿ ಮುನಿರತ್ನ ಅವರು ಮತದಾರರಿಗೆ ಕುಕ್ಕರ್ ಹಂಚಿಕೆ ಮಾಡುತ್ತಿರುವುದನ್ನು ಬಲವಾಗಿ ಖಂಡಿಸಿದ ಅವರು ಇದು ಅಕ್ಷಮ್ಯ ಇಂತಹ ನಾಯಕರನ್ನು ಎಂದಿಗೂ ಬೆಂಬಲಿಸಬಾರದು ಚುನಾವಣೆ ಪರೋಕ್ಷವಾಗಿ ನಡೆಯಲಿ ಎಂದ ಅವರು ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಆಡಳಿತಗಾರರಾಗಿದ್ದಾರೆ, ಆದರೇ ಸ್ಥಳೀಯ ಅಭ್ಯರ್ಥಿಗಳು ಮತದಾರರಿಗೆ ಅಮಿಷವೊಡ್ಡಿತ್ತಿರುವುದು ತರವಲ್ಲವೆಂದು ತಿಳಿಸಿದರು.
ಸಾಮಾಜಿಕ ಜಾಗೃತಿ ವಿಷಯವನ್ನೊಳಗೊಂಡಿರುವ ಡಿಕ್ಟೇಟರ್ ಹುಚ್ಚ ವೆಂಕಟ್ ಸಿನಿಮಾವು ಈಗಾಗಲೇ ಮಡಿಕೇರಿ, ಭಾಗಮಂಡಲದಲ್ಲಿ ಚಿತ್ರೀಕರಣವಾಗಿದೆ ಎಂದು ಚಿತ್ರದ ಬಗ್ಗೆ ತಿಳಿಸಿ, ಮಾಧ್ಯಮ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಅವಹೇಳನಕಾರಿ ಹೇಳಿಕೆಗಳ ಮಾಮೂಲಿ ತಮ್ಮದೇ ಹುಚ್ಚನ ಸ್ಟೈಲಿನಲ್ಲಿ ನೀವುಗಳು ಬಳೆ ತೊಟ್ಟಿಕೊಳ್ಳಿ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ನಾಯಕಿ ನಟಿ ಐಶ್ವರ್ಯ ಸೇನ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: