ಮೈಸೂರು

ದಿ.28ರಂದು ಜೆಎಸ್ಎಸ್ ಮಹಾವಿದ್ಯಾಲಯದ ಪದವೀಧರ ದಿನಾಚರಣೆ : ಚಿನ್ನದ ಪದಕ ವಿಜೇತರಿಗೆ ಸನ್ಮಾನ

ಮೈಸೂರು,ಮಾ.26 : ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿಯ ಅಂಗಸಂಸ್ಥೆಯಾದ  ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪದವೀಧರ ದಿನಾಚರಣೆಯನ್ನು ಮಾ.28ರಂದು ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಸಭಾಂಗಣದಲ್ಲಿ ಆಯೋಜಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಹೆಚ್.ಬಸವನಗೌಡಪ್ಪ ಈ ಬಗ್ಗೆ ಮಾಹಿತಿ ನೀಡಿ, ಅಂದು ಸಂಜೆ 4.30ಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ ಪಾಟೀಲ್ ಪಾಲ್ಗೊಂಡು ಪದವಿ ಪ್ರದಾನ ಮಾಡುವರು, ಜೆಎಸ್ಎಸ್ ವಿದ್ಯಾಪೀಠದ ವ್ಯವಸ್ಥಾಪಕ ಕಾರ್ಯದರ್ಶಿಯಾದ ಡಾ.ಸಿ.ಜಿ.ಬೆಟ್ಟಸೂರು ಮಠ ಅಧ್ಯಕ್ಷತೆ. ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿ ಕುಲಪತಿ ಡಾ.ಬಿ.ಸುರೇಶ್ ಭಾಗಿಯಾಗುವರು ಎಂದು ತಿಳಿಸಿದರು.

ಕುಲಸಚಿವ ಡಾ.ಬಿ.ಮಂಜುನಾಥ್ ಮಾತನಾಡಿ 2008ರಲ್ಲಿ ಸ್ಥಾಪನೆಯಾದ ವಿವಿಯೂ ರಾಜ್ಯದಲ್ಲಿ 2ನೇ ಅತ್ಯುತ್ತಮ ಸ್ಥಾನ ಗಳಿಸಿದ್ದು, ದೇಶದಲ್ಲಿ 35ನೇ ಅತ್ಯುತ್ತಮ ವಿವಿಯಾಗಿದ್ದು. ಉನ್ನತ ಸಂಶೋಧನಕರನ್ನು ಹಾಗೂ ಪ್ರತಿಭಾವಂತರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ 6 ಚಿನ್ನದ ಪದಕ ಗಳಿಸಿ ಕೇರಳದ ಡಾ.ಆತಿರಾ ಜಿ ದಾಸ್ ಸೇರಿದಂತೆ ಉತ್ತಮ ಹೊರಹೋಗುವ ವಿದ್ಯಾರ್ಥಿಯಾಗಿದ್ದು ಇವರೊಂದಿಗೆ ಇನ್ನೂ 6 ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು..

ನಿರ್ದೇಶಕ ಡಾ.ಕುಶಾಲಪ್ಪ, ಡಾ.ಸುದೀಂದ್ರ ಭಟ್, ಡಾ.ಬಾಲರಾಜ್, ಡಾ.ಜಿ.ವಿ.ಮಂಜುನಾಥ್, ಸತೀಶ್ ಚಂದ್ರ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: