ದೇಶಪ್ರಮುಖ ಸುದ್ದಿ

ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಸಿಬಿಐ ವಶಕ್ಕೆ ಪೀಟರ್ ಮುಖರ್ಜಿಯಾ

ನವದೆಹಲಿ,ಮಾ.26-ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೀಡಿಯಾ ಬ್ಯಾರನ್ ಪೀಟರ್ ಮುಖರ್ಜಿಯಾ ಅವರನ್ನು ಮಾ.31ರವರೆಗೆ ಸಿಬಿಐ ವಶಕ್ಕೆ ಒಪ್ಪಿಸುವಂತೆ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಸಹಾಯ ಪಡೆದು ಐಎನ್‌ಎಕ್ಸ್ ಮಿಡಿಯಾ ಮಾಲೀಕರಾದ ಮುಖರ್ಜಿಯಾ ಫಾರಿನ್ ಇನ್ವೆಸ್ಟ್ಮೆಂಟ್ ಪ್ರೋಮೋಷನ್ ಬೋರ್ಡ್ (ಎಫ್‌ಐಪಿಬಿ) ಅನುಮೋದನೆಯನ್ನು ಪಡೆಯಲು ಲಂಚ ನೀಡಿದ್ದರು.

ತನಿಖಾ ದಳವು ಹೆಚ್ಚುವರಿ ತನಿಖೆಗಾಗಿ ಮುಖರ್ಜಿಯಾ ಅವರನ್ನು ಐದು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ಮಾ.23 ರಂದು ಪ್ರಕರಣದ ಪ್ರಮುಖ ಆರೋಪಿ ಕಾರ್ತಿ ಚಿದಂಬರಂಗೆ 10 ಲಕ್ಷ ರೂ. ದಂಡ ವಿಧಿಸಿ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. (ಎಂ.ಎನ್)

Leave a Reply

comments

Related Articles

error: