ಮೈಸೂರು

ಶಿಸ್ತುಬದ್ಧ ಜೀವನ ಮತ್ತು ಜೀವನದ ಮೌಲ್ಯಗಳನ್ನು ತಿಳಿದುಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ : ಪ್ರೊ.ಎನ್ ಉಷಾರಾಣಿ

ಮೈಸೂರು,ಮಾ.26:- ಶಿಸ್ತುಬದ್ಧ ಜೀವನ ಮತ್ತು ಜೀವನದ ಮೌಲ್ಯಗಳನ್ನು ತಿಳಿದುಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯವಾಗಲಿದೆ ಎಂದು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ  ಪ್ರೊ.ಎನ್ ಉಷಾರಾಣಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ವಿಜ್ಞಾನ ಭವನದ ಸಭಾಂಗಣದಲ್ಲಿಂದು ಪ್ರೊ.ಎನ್ ಉಷಾರಾಣಿ ಅವರಿಗೆ ಗುರುನಮನ ಕಾರ್ಯಕ್ರಮದಲ್ಲಿ ಗುರುನಮನ ಸ್ವೀಕರಿಸಿ ಮಾತನಾಡಿದರು. ಆಗಿನ ಕಾಲಕ್ಕೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ನಮ್ಮ ಪಾಲಕರು ಶ್ರಮಿಸಿದ್ದಾರೆ. ಶಿಸ್ತುಬದ್ಧ ಜೀವನ ನಡೆಸುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟರು.    ಜೀವನದ ಮೌಲ್ಯ ಹೇಗಿರಬೇಕೆಂವುದನ್ನು ತಿಳಿಸಿಕೊಟ್ಟರು. ಅವರಿಂದ ನಾನು ಪತ್ರಿಕೋದ್ಯಮ ವಿಭಾಗದ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ವಿದ್ಯಾರ್ಥಿಗಳೂ ಕೂಡ ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಿ ಎಂದರು.

ಸಂವಹನ ತಜ್ಞ ಪ್ರೊ.ಹೆಚ್.ಎಸ್.ಈಶ್ವರ ಮಾತನಾಡಿ ಜೀವನದಲ್ಲಿ ಕಷ್ಟ ಕೋಟಲೆಗಳಿರತ್ತೆ. ಕೊನೆಗೊಂದು ದಿನ ಒಳ್ಳೆದಿನ ಬರತ್ತೆ. ಆ ಒಳ್ಳೆಯ ದಿನವೇ ಇಂದು ಅಂತ ನನಗನಿಸುತ್ತಿದೆ. ಅದಕ್ಕೆ ಕಾರಣ ಪ್ರೊ.ಉಷಾರಾಣಿಯವರ ಶಿಷ್ಯರು ಗುರುನಮನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಎಂದರು. ಪತ್ರಿಕೋದ್ಯಮ ಸಾಕಷ್ಟು ದೊಡ್ಡದಾಗಿ ಬೆಳೆದಿದೆ. ವಿದ್ಯಾರ್ಥಿಗಳ ಸಾಧನೆ ನೋಡಿದರೇ ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.

ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು ಮಾತನಾಡಿ ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಅವರು ಹಾಕಿಕೊಟ್ಟ ಅನೇಕ ಆದರ್ಶಗಳನ್ನು ಇಂದು ನೆನಪು ಮಾಡಿಕೊಟ್ಟಿದ್ದಾರೆ. ಪ್ರೊ.ಉಷಾರಾಣಿಯವರದ್ದು ಮೃದುಸ್ವಭಾವ. ಎಂದೂ ಏರುಧ್ವನಿಯಲ್ಲಿ ಮಾತನಾಡಿದವರಲ್ಲ. ಆದರೆ ಅವರ ಮಾತು ಮಾತ್ರ ಮೊನಚು. ಅಂಥಹ ಪ್ರಾಧ್ಯಾಪಕರಡಿ ಜ್ಞಾನಸಂಪಾದನೆ ಮಾಡಿರುವುದೇ ವಿದ್ಯಾರ್ಥಿಗಳ ದೊಡ್ಡ ಸಾಧನೆ ಎಂದರು.

ಈ ಸಂದರ್ಭ ಮಾಧ್ಯಮ ಸಂಹಿತೆ ವಿಚಾರ ಸಂಕಿರಣವನ್ನೂ ಹಮ್ಮಿಕೊಳ್ಳಲಾಗಿತ್ತು.ಡೆಕ್ಕನ್ ಕ್ರಾನಿಕಲ್ ನ ಭಾಸ್ಕರ ಹೆಗಡೆ, ಜೀ ನೆಟ್ ವರ್ಕ್ ಮಾಜಿ ಉಪಾಧ್ಯಕ್ಷ ಡಾ.ಗೌತಮ್ ಮಾಚಯ್ಯ, ಹಿರಿಯ ಪತ್ರಕರ್ತ ಪದ್ಮರಾಜ್ ದಂಡಾವತಿ, ಜೀ.ಜಿ.ರಾಜೀವ್, ಪದ್ಮಶೇಖರ್, ಪ್ರೊ.ನಿರಂಜನ್ ವಾನಳ್ಳಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ.ಎಸ್.ಎಚ್)

Leave a Reply

comments

Related Articles

error: