ಮೈಸೂರು

ಬಿಜೆಪಿಗೆ ಸಾಮಾನ್ಯ ಜನರ ಸಮಸ್ಯೆ ಅರ್ಥವಾಗುತ್ತಿಲ್ಲ: ರಮ್ಯಾ ಆರೋಪ

ನೋಟು ರದ್ದು ಮಾಡುವ ಮೊದಲು ಕೇಂದ್ರ ಸರಕಾರವು ಯಾವುದೇ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಬಿಜೆಪಿಗೆ ಸಾಮಾನ್ಯ ಜನರ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಮಾಜಿ ಸಂಸದೆ ರಮ್ಯಾ ಆರೋಪಿಸಿದರು.

ನೋಟು ರದ್ದು ವಿರೋಧಿಸಿ ಸೋಮವಾರದಂದು ಆಕ್ರೋಶ್ ದಿವಸ್ ಆಚರಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು, ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ಕಪ್ಪುಹಣದ ವಿಚಾರದಲ್ಲಿ ಕೇಂದ್ರ ಸರಿಯಾದ ಯೋಜನೆ ರೂಪಿಸುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯುಂಟಾಗಿದೆ. ನೋಟು ರದ್ದು ವಿಚಾರ ಬಿಜೆಪಿಗೆ ಮೊದಲೇ ಗೊತ್ತಿತ್ತು. ಕೇಂದ್ರ ಸರಕಾರ ಆರ್‍ಬಿಐ ಗೌರವಕ್ಕೆ ಕಳಂಕ ತಂದಿದೆ ಎಂದರು.

ಕಾಳಧನದ ವಿರುದ್ಧ ನಾವೂ ಹೋರಾಟ ಮಾಡುತ್ತೇವೆ. ಆದರೆ, ಬಿಜೆಪಿ ಜನರ ಸಮಸ್ಯೆಯನ್ನು ಅರಿಯಲು ಯತ್ನಿಸುತ್ತಿಲ್ಲ ಎಂದು ದೂರಿದರು.

Leave a Reply

comments

Related Articles

error: