ಮನರಂಜನೆ

ನಿರ್ದೇಶಕ ರೋಹಿತ್ ಶೆಟ್ಟಿಯವರ ‘ಸಿಂಬಾ’ ಚಿತ್ರದಲ್ಲಿ ನಟಿಸುತ್ತಿಲ್ಲ ಈ ನಟ!

ದೇಶ(ಮುಂಬೈ)ಮಾ.26:- ಬಾಲಿವುಡ್ ನಟ ಆರ್ ಮಾಧವನ್ ನಿರ್ದೇಶಕ ರೋಹಿತ್ ಶೆಟ್ಟಿಯವರ ‘ಸಿಂಬಾ’ ಚಿತ್ರದಲ್ಲಿ ನಟಿಸುತ್ತಿಲ್ಲ.

ಕಳೆದ ಕೆಲವು ದಿನಗಳ ಹಿಂದೆ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಮಾಧವನ್ ಸುಧಾರಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ನವದೀಪ್ ಸಿಂಗ್ ಅವರ ಆ್ಯಕ್ಷನ್ ದೃಶ್ಯಗಳ ಐತಿಹಾಸಿಕ ಚಿತ್ರದಿಂದ ಹೊರಗುಳಿದಿದ್ದಾರೆ. ಈ ಕುರಿತು ಟ್ವೀಟರ್ ಮಾಡಿರುವ ‘ಅವರು ನನ್ನ ಮಗನಂತೆ ರೋಹಿತ್ ಶೆಟ್ಟಿ ಮತ್ತವರ ಚಿತ್ರಗಳ ಅಭಿಮಾನಿಯಾಗಿದ್ದೇನೆ.ಇದರಿಂದ ನಮ್ಮಿಬ್ಬರ ಹೃದಯವೂ ಒಡೆದಿದೆ. ನನ್ನ ಅನಾರೋಗ್ಯದ ಕಾರಣ ‘ಸಿಂಬಾ’ ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇನೆ. ಆದರೆ ಒಂದು ಒಳ್ಳೆಯ, ರೋಮಾಂಚಕಾರಿ ಅವಕಾಶ ಕೈತಪ್ಪಿ ಹೋಗಿದೆ ಎಂದಿದ್ದಾರಂತೆ. ನಟ ರಣವೀರ್ ಸಿಂಗ್ ‘ಸಿಂಬಾ’ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಗೊಂಡಿದೆ. ಪೋಸ್ಟರ್ ನಲ್ಲಿ ರಣವೀರ್ ಬೇರೆ ರೀತಿಯಾಗಿ ಕಾಣಿಸುತ್ತಾರೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಣವೀರ್ ತನ್ನ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಕೂಗಾಡುವಂತೆ ಕಾಣಿಸುತ್ತಿದೆ.   (ಎಸ್.ಎಚ್)

Leave a Reply

comments

Related Articles

error: