
ಮೈಸೂರು
ಕೆ.ಪಿ.ಶಿವಪ್ಪ ನಿಧನ : ಶ್ರದ್ಧಾಂಜಲಿ
ಮೈಸೂರು,ಮಾ.26 : ಜೆಎಸ್ಎಸ್ ಮಹಾವಿದ್ಯಾಪೀಠದ ನಿವೃತ್ತ ಲೆಕ್ಕಾಧಿಕಾರಿ ಕೆ.ಪಿ.ಶಿವಪ್ಪ ಅವರು ನಿಧನರಾಗಿದ್ದಾರೆ.
ಅವರು 1991ರಿದ ಜೆಸ್ಎಸ್ ವಿದ್ಯಾಪೀಠದಲ್ಲಿ ಸುಮಾರು 19 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಯಾಗಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳು ಮತ್ತು ಉದ್ಯೋಗಿಗಳು ಮೃತರ ಗೌರವಾರ್ಥ ಶ್ರದ್ದಾಂಜಲಿ ಸಲ್ಲಿಸಿದರು.
ಸಭೆಯಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ, ಕೆ.ಆರ್.ಸಂತಾನ, ನರ್ಗಲೆ ಶಿವಕುಮಾರ್, ಪ್ರೊ.ಟಿ.ಡಿ.ಸುಬ್ಬಣ್ಣ, ಪುಟ್ಟಸುಬ್ಬಪ್ಪ, ಮಠಮಲ್ಲಿಕಾರ್ಜುನ, ಚಿದ್ರಿ ಶಂಕ್ರಯ್ಯಸ್ವಾಮಿ, ಪ್ರೊ.ಮೊರಬದ ಮಲ್ಲಿಕಾರ್ಜುನ್, ಮಹೇಶ್ ಮತ್ತಿತರರು ಇದ್ದರು. (ಕೆ.ಎಂ.ಆರ್)